Saturday, April 19, 2025
Google search engine

HomeUncategorizedರಾಷ್ಟ್ರೀಯಪಂಜಾಬ್ ಎಎಪಿ ಶಾಸಕ ಗುರುಪ್ರೀತ್ ಗೋಗಿ ಬಸ್ಸಿ ಗುಂಡೇಟಿಗೆ ಬಲಿ

ಪಂಜಾಬ್ ಎಎಪಿ ಶಾಸಕ ಗುರುಪ್ರೀತ್ ಗೋಗಿ ಬಸ್ಸಿ ಗುಂಡೇಟಿಗೆ ಬಲಿ

ಲೂಧಿಯಾನಾ: ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಪಶ್ಚಿಮ ಲೂಧಿಯಾನಾ ಶಾಸಕ ಗುರುಪ್ರೀತ್ ಗೋಗಿ ಬಸ್ಸಿ ಗುಂಡೇಟಿನ ಗಾಯಗಳಿಂದ ಶುಕ್ರವಾರ ರಾತ್ರಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಡಿಎಂಸಿ ಆಸ್ಪತ್ರೆಗೆ ತರಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಜಸ್ಕರಣ್ ಸಿಂಗ್ ತೇಜಾ ಹೇಳಿದ್ದಾರೆ. ರಾತ್ರಿ 12 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸ್ ಆಯುಕ್ತ ಕುಲದೀಪ್ ಚಾಹಲ್ ಮತ್ತು ಡಿಸಿಪಿ ಜಿತೇಂದ್ರ ಜೋರ್ವಾಲ್ ಕೂಡಾ ಡಿಎಂಸಿಎಚ್ ಆಸ್ಪತ್ರೆಗೆ ಧಾವಿಸಿದ್ದಾರೆ.

ದಿನವಿಡೀ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಗೋಪಿ ಗುಮರ್ಮಂಡಿಯಲ್ಲಿದ್ದ ತಮ್ಮ ಮನೆಯಿಂದ ಸಂಜೆ ಆಗಮಿಸಿದ್ದರು ಎಂದು ಎಎಪಿ ಜಿಲ್ಲಾ ಕಾರ್ಯದರ್ಶಿ ಪರಮವೀರ ಸಿಂಗ್ ಹೇಳಿದ್ದಾರೆ. ಕೊನೆಕ್ಷಣದಲ್ಲಿ ಅವರು ಕುಟುಂಬದ ಜತೆಗಿದ್ದರು. ಗೋಗಿಯವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಗುಂಡಿನ ಸದ್ದು ಕೇಳಿ ಪತ್ನಿ ಡಾ.ಸುಖಚಿನ್ ಕೌರ್ ಗೋಗಿ ಪತಿಯ ಬಳಿ ಧಾವಿಸಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದುದು ಕಂಡುಬಂತು, ತಕ್ಷಣವೇ ಕುಟುಂಬದವರು ಅವರನ್ನು ಡಿಎಂಸಿಎಚ್ ಆಸ್ಪತ್ರೆಗೆ ಕರೆದೊಯ್ದರು. ಆ ವೇಳೆಗಾಗಲೇ ಅವರು ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದರು.

ವಿಳಂಬದ ಕಾರಣಕ್ಕೆ 2024ರ ಆಗಸ್ಟ್ನಲ್ಲಿ ಬುದ್ಧ ನಾಲಾ ಪೈಪ್ಲೈನ್ ಯೋಜನೆಯ ಅಡಿಗಲ್ಲನ್ನು ಒಡೆದು ಗೋಗಿ ಸುದ್ದಿಯಾಗಿದ್ದರು. 2022ರ ಮೇ ತಿಂಗಳಲ್ಲಿ ಅವರು ಈ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು.

2022ರ ಚುನಾವಣೆಯಲ್ಲಿ ತಾಯಿ ಉಡುಗೊರೆಯಾಗಿ ನೀಡಿದ್ದ ಸ್ಕೂಟರ್ನಲ್ಲಿ ಪತ್ನಿಯ ಜತೆ ತೆರಳಿ ಅವರು ನಾಮಪತ್ರ ಸಲ್ಲಿಸಿದ್ದರು. ಈ ಸ್ಕೂಟರನ್ನು ಅದೃಷ್ಟದ ಸಂಕೇತ ಎಂದು ಪರಿಗಣಿಸಿ, ಪ್ರತಿ ಚುನಾವಣೆಯಲ್ಲೂ ಇದೇ ಸ್ಕೂಟರ್ನಲ್ಲಿ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದರು.

58 ವರ್ಷದ ಗೋಗಿ 2022ರಲ್ಲಿ ಶಾಸಕರಾಗುವ ಮುನ್ನ ಅವರು ಪಾಲಿಕೆ ಸದಸ್ಯರಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದರು. ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವರು ಚುನಾವಣೆ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಸೇರಿದ್ದರು.

RELATED ARTICLES
- Advertisment -
Google search engine

Most Popular