ಹೊಸದಿಲ್ಲಿ : ಡಿಸೆಂಬರ್ ೨೦೨೪ ರಲ್ಲಿ ರೂ. ೮೯,೦೮೬ ಕೋಟಿ ರೂಪಾಯಿಗಳಿಗೆ ಬದಲಾಗಿ, ಕೇಂದ್ರ ಸರ್ಕಾರವು ಶುಕ್ರವಾರ ರಾಜ್ಯ ಸರ್ಕಾರಗಳಿಗೆ ರೂ.೧,೭೩,೦೩೦ ಕೋಟಿ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲು ಕಂತಿನ ರೂಪದಲ್ಲಿ ೬,೩೧೦ ಕೋಟಿ ರೂ ಬಿಡುಗಡೆ ಮಾಡಿದೆ.
ರಾಜ್ಯಗಳು ಬಂಡವಾಳ ವೆಚ್ಚವನ್ನು ವೇಗಗೊಳಿಸಲು, ಅವುಗಳ ಅಭಿವೃದ್ಧಿ ಮತ್ತು ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಈ ತಿಂಗಳು ಹೆಚ್ಚಿನ ಮೊತ್ತವನ್ನು ಹಂಚಿಕೆ ಮಾಡಲಾಗುತ್ತಿದೆ. ತೆರಿಗೆ ಹಂಚಿಕೆ ಎಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ತೆರಿಗೆ ಆದಾಯದ ವಿತರಣೆ. ಕೆಲವು ತೆರಿಗೆಗಳ ಆದಾಯವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ನ್ಯಾಯಯುತ, ಸಮಾನ ರೀತಿಯಲ್ಲಿ ಹಂಚುವುದು ಸಾಂವಿಧಾನಿಕ ಕಾರ್ಯವಿಧಾನವಾಗಿದೆ. ಹಣಕಾಸು ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆಗಳ ನಿವ್ವಳ ಆದಾಯದ ವಿಭಜನೆಯನ್ನು ಶಿಫಾರಸು ಮಾಡುತ್ತದೆ.
ಉತ್ತರ ಪ್ರದೇಶವು ಅತಿ ಹೆಚ್ಚು ರೂ.೩೧,೦೩೯.೮೪ ಕೋಟಿಯನ್ನು ಪಡೆದುಕೊಂಡಿದೆ. ನಂತರ ರೂ.೧೭,೪೦೩.೩೬ ಕೋಟಿ ರೂಪಾಯಿಗಳನ್ನು ಮತ್ತು ಪಶ್ಚಿಮ ಬಂಗಾಳಕ್ಕೆ ರೂ.೧೩೦೧೭.೦೬ ಕೋಟಿಗಳನ್ನು ಪಡೆದುಕೊಂಡಿದೆ. ಮಹಾರಾಷ್ಟ್ರಕ್ಕೆ ರೂ.೧೦.೯೩೦.೩೧ ಕೋಟಿ ನೀಡಲಾಗಿದ್ದರೆ, ರಾಜಸ್ಥಾನಕ್ಕೆ ರೂ.೧೦,೪೨೬.೭೮ ಕೋಟಿ ನೀಡಲಾಗಿದೆ. ಗೋವಾ ಮತ್ತು ಸಿಕ್ಕಿಂ ಕ್ರಮವಾಗಿ ರೂ.೬೬೭.೯೧ ಕೋಟಿ ಮತ್ತು ರೂ.೬೭೧.೩೫ ಕೋಟಿಯಷ್ಟು ಕಡಿಮೆ ಮೊತ್ತವನ್ನು ಪಡೆದಿವೆ.
೨೦೨೧ ರಿಂದ ೨೦೨೬ ರ ಅವಧಿಗೆ ಕೇಂದ್ರ ತೆರಿಗೆಗಳಲ್ಲಿ ರಾಜ್ಯಗಳ ಪಾಲು ಶೇ.೪೧ ರಷ್ಟು ಇರಬೇಕೆಂದು ಶಿಫಾರಸು ಮಾಡಲಾಗಿದೆ. ಇದು ೨೦೨೦-೨೧ ರಂತೆಯೇ ಇದೆ. ಇದು ೨೦೧೫-೨೦ ರ ಅವಧಿಗೆ ೧೪ ನೇ ಹಣಕಾಸು ಆಯೋಗವು ಶಿಫಾರಸು ಮಾಡಿದ ಶೇ.೪೨ ರಷ್ಟು ಪಾಲುಗಿಂತ ಕಡಿಮೆಯಾಗಿದೆ. ಕೇಂದ್ರದ ಸಂಪನ್ಮೂಲಗಳಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಹೊಸದಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲು ಶೇ.೧ ರಷ್ಟು ಹೊಂದಾಣಿಕೆ ಮಾಡಲಾಗಿದೆ.