Saturday, April 19, 2025
Google search engine

Homeರಾಜ್ಯಸುದ್ದಿಜಾಲಜನತೆಯ ವಿಶ್ವಾಸಗಳಿಸಿ ಪ್ರವಾಸಕ್ಕೆ ಆದ್ಯತೆ ನೀಡುತ್ತಿರುವ ಅವೇರೆ ವೋಯೇಜ್ ಕಂಪನಿ ಕಾರ್ಯ ಶ್ಲಾಘನೀಯ: ಶಾಸಕ ಜಿ.ಡಿ.ಹರೀಶ್...

ಜನತೆಯ ವಿಶ್ವಾಸಗಳಿಸಿ ಪ್ರವಾಸಕ್ಕೆ ಆದ್ಯತೆ ನೀಡುತ್ತಿರುವ ಅವೇರೆ ವೋಯೇಜ್ ಕಂಪನಿ ಕಾರ್ಯ ಶ್ಲಾಘನೀಯ: ಶಾಸಕ ಜಿ.ಡಿ.ಹರೀಶ್ ಗೌಡ

ಹುಣಸೂರು: ಕೇವಲ ಎರಡ್ಮೂರು ವರ್ಷದಲ್ಲಿ ಜನತೆಯ ವಿಶ್ವಾಸಗಳಿಸಿ ಜನಸಮಾನ್ಯರು ಕೂಡ ವಿದೇಶ ಸುತ್ತಲು ಅವಕಾಶ ಮಾಡಿಕೊಟ್ಟ ಅವೇರೆ ವೋಯೇಜ್ ಕಂಪನಿ ಕಾರ್ಯ ಶ್ಲಾಘನೀಯವೆಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.

ನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ಮತ್ತು ಅವೇರೆ ವೋಯೇಜ್ ಕಂಪನಿ ಹಮ್ಮಿಕೊಂಡಿದ್ದ (ಬಿಓಪಿ) ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ಬರುವ ಕೆಲವು ಕಂಪನಿಗಳು ಜನರ ಮನಸನ್ನು ಗೆಲ್ಲುವ ನಿಟ್ಟಿನಲ್ಲಿ ಸೋತಿವೆ. ಆದರೆ ಅವೇರೆ ವೋಯೇಜ್ ನಂಬಿಕೆಗೆ ಹತ್ತಿರವಿದ್ದು, ಅವರ ಭಾವನೆಗಳಿಗೆ ಏನು ಬೇಕೊ ಅದನ್ನು ಕೊಡುವ ಮೂಲಕ ಪ್ರವಾಸಕ್ಕೆ ಆದ್ಯತೆ ನೀಡಿ ಸರಕಾರಕ್ಕೆ ನೆರವು ನೀಡುವ ಕಾರ್ಯ ಉತ್ತಮವಾಗಿದೆ ಎಂದರು.

ಅವೇರೆ ವೋಯೇಜ್ ಕಂಪನಿಯಂತಹ ಒಂದು ಸಂಸ್ಥೆ ಪ್ರಾರಂಭವಾದ ಕಾರಣ ಇಷ್ಟೆಲ್ಲಾ ಅವಕಾಶ ಸಿಕ್ಕಿದೆ. ಕೇವಲ 35 ಸಾವಿರ ಪಡೆದು ಒಂದು ಸದಸ್ಯತ್ವ ನೀಡಿ ಪಡೆದ ಹಣಕ್ಕೆ ಒಮ್ಮೆ ರಾಜ್ಯ ಅಥವಾ ವಿದೇಶದಲ್ಲಿ ನಾಲ್ಕು ದಿನಗಳ ಕಾಲ ಉತ್ತಮ ಪ್ರವಾಸ ನೀಡಿ ನಂತರವೂ ಬಂಡವಾಳವಿಲ್ಲದೆ ನಿರುದ್ಯೋಗಿಗಳಿಗೆ ಸಂಪಾದನೆ ಅವಕಾಶ ನೀಡುವ ಕಂಪನಿ ಇದಾಗಿದೆ ಸದ್ಬಳಕೆ ಮಾಡಿಕೊಳ್ಳಿ ಎಂದರು.

ಅದೇ ರೀತಿ ರಾಜ್ಯದ ಉದ್ದಗಲಕ್ಕೂ ಸೂಪರ್ ಟೀಮ್ ಕಟ್ಟುವ ಮೂಲಕ ಇಡೀ ರಾಜ್ಯದಲ್ಲಿ 42 ಸಾವಿರ ಸದಸ್ಯರನ್ನು ಕಂಪನಿಗೆ ಸೇರಿಸಿ ಮಧ್ಯಮ ವರ್ಗದ ಜನರೂ ಕೂಡ ಉತ್ತಮ ದರ್ಜೆಯ ಪ್ರವಾಸವನ್ನು ಮಾಡಲು ಸಹಕಾರಿಯಾದ ಶರತ್ ಕುಮಾರ್ ಸಾಧನೆ ಅಮೂಲ್ಯವಾದದ್ದು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಗಾವಡಗೆರೆ ಗುರುಲಿಂಗ ಮಠದ ಶ್ರೀ ನಟರಾಜ ಸ್ವಾಮೀಜಿ ಮಾತನಾಡಿ, ಬದುಕಿನ ಅವಿಭಾಜ್ಯ ಅಂಗವಾಗಿರುವ ಪ್ರವಾಸ ಎಷ್ಟೋ ಜನರ ಪ್ರಾಯಸವಾಗಿದೆ. ಆದರೆ ಅವೇರೆ ವೋಯೇಜ್ ಕಂಪನಿ ವತಿಯಿಂದ ನೀಡುವ ಪ್ರವಾಸ ಅನುಕೂಲಕರವಾದ ವಾತಾವರಣ ನಿರ್ಮಾಣ ಮಾಡುವ ಮೂಲಕ ಆಹ್ಲಾದಕರವಾದ ಮನಸ್ಥಿಯನ್ನು ನಮ್ಮ ಮುಂದಿಡುತ್ತದೆ ಎಂದರು.

ಪ್ರವಾಸ ಅಂದಾಗ ನಮ್ಮ ರಾಜ್ಯ, ನಮ್ಮ ದೇಶದ ಅರಣ್ಯ ಸಂಪತ್ತು, ಜಲ, ನೆಲ, ಗಾಳಿ, ಬೆಳಕು, ಇನ್ನೆಲ್ಲೂ ಸಿಗದು. ಆದರೂ ಆದರೆ ಮೇಲಿನ ಸಂಪತ್ತುಗಳನ್ನು ಉಳಿಸುವ ಪ್ರಯತ್ನ ನಮ್ಮದಾಗಬೇಕು. ಬೇರೆ ರಾಜ್ಯಗಳು, ಬೇರೆ ದೇಶಗಳು ಪ್ರವಾಸಕ್ಕೆ ಅಂತಲೇ ಕಾದು ಕುಳಿತಿವೆ. ಅಂತ ದೇಶಗಳನ್ನು ತುಂಬ ಅಚ್ಚು ಕಟ್ಟಾಗಿ. ಕಡಿಮೆ ಹಣದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿರುವ,ಅವೇರೆ ವೋಯೇಜ್ ಕಂಪನಿ ಇನ್ನೂ ಎತ್ತಕ್ಕೆ ಬೆಳೆದು ಇಲ್ಲದವರಿಗೆ ನೆರವಾಗಲಿ ಎಂದರು.

ನಮ್ಮತ್ತರ ಎಷ್ಟೇ ಹಣವಿದ್ದರೂ ಪ್ರಕೃತಿಯಿಂದ ಸಿಗುವ ಗಾಳಿ ನೀರು, ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಅರಿಯಬೇಕು. ಜೀವನ ಅಂದಮೇಲೆ ಕಷ್ಟ ಸುಖಗಳು ಸರ್ವೇ ಸಾಮಾನ್ಯ. ಆದ್ದರಿಂದ ಬಿಡುವಿನ ವೇಳೆ ನಾವು ಕೂಡ ಪ್ರವಾಸಕ್ಕೆ ಆದ್ಯತೆ ನೀಡಬೇಕಿದೆ ಎಂದರು.

ಭೂತಾನ್ ಎಂಬ ದೇಶದಲ್ಲಿ ಗಾಳಿ ಉಚಿತ ಎಂದರೆ ತಪ್ಪಾಗದು ಅಲ್ಲಿ ಪ್ರತಿಯೊಬ್ಬರೂ ಹೊಲ, ಗದ್ದೆಗಳಲ್ಲಿ ಗಿಡ, ಮರಗಳನ್ನು ಬೆಳೆಯಲೇಬೇಕು. ಅಂತಹ ಕಠಿಣ ಕಾನೂನು ಅಲ್ಲಿ ಬಳಕೆಯಲ್ಲಿದೆ. ಅಂತಹ ನಿಯಮಗಳನ್ನು ಪಾಲಿಸುವ ಭಾವನೆ ಎಲ್ಲರಲ್ಲೂ ಬರಬೇಕೆಂದರು.

ರೋಟರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಪ್ರಾಸ್ತಾವಿಕ ಮಾತನಾಡಿ, ಅವೇರೆ ವೋಯೇಜ್ ಕಂಪನಿ ಪ್ರವಾಸಿಗರನ್ನು ಗಮನದಲ್ಲಿಟ್ಟು ಕಮ್ಮಿ ಬಂಡವಾಳದಿಂದ ಸಂಪಾದನೆಗೆ ಒತ್ತು ನೀಡಿದೆ. ಎಲ್ಲರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಸ್ನೇಹ ಸೇತುವೆಯಾಗಿ ಉತ್ತಮ ಸಂಬಂಧ ಕಟ್ಟುವದರ ಜೊತೆಗೆ ಪ್ರವಾಸ ಕಲ್ಪಿಸುವ ವ್ಯವಸ್ಥೆಗೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರೋಟರಿ ಅಧ್ಯಕ್ಷ ಡಾ.ಪ್ರಸನ್ನ ಕೆ.ಪಿ. ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎ.ವಿ.ಕಂಪನಿ ಫೌಂಡರ್ ಶರತ್ ಕುಮಾರ್, ರೋಟರಿ ಕಾರ್ಯದರ್ಶಿ ಹೆಚ್.ಆರ್.ಕೃಷ್ಣ ಕುಮಾರ್, ಅವೇರೆ ವೋಯೇಜ್ ಕಂಪನಿಯ ಸಂತೋಷ್, ಆಟೋ ರಾಮಚಂದ್ರ, ಶಶಿಕಲಾ ಬಸವಲಿಂಗಯ್ಯ, ಚನ್ನಪಟ್ಟಣ ಮಹದೇವ್, ಮಹೇವ್, ರೇಣುಕ ಪ್ರಸಾದ್, ಡಾ.ಬಸವರಾಜ್, ವೀರಭದ್ರ ಚಾರ್, ನಾಗನಹಳ್ಳಿ ಪಾಂಡು, ಪಾಂಡುಕುಮಾರ್, ಇನ್ನಾರ್ವೀಲ್ ಸ್ಮಿತಾ ದಯಾನಂದ್, ಜಯಲಕ್ಷ್ಮಿ, ಜಿ.ವಿ.ಶ್ರೀ ನಾಥ್, ಕಿರಂಗೂರು ಬಸವರಾಜ್ ಇದ್ದರು.

RELATED ARTICLES
- Advertisment -
Google search engine

Most Popular