ಮನೆ ಮನೆಗೆ ತೆರಳಿ, ಸಮ್ಮೇಳನಕ್ಕೆ ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ಆಹ್ವಾನ ಪತ್ರಿಕೆ ನೀಡಿ ಆಮಂತ್ರಣ
ಚಾಮರಾಜನಗರ: ಜನವರಿ 18 ಮತ್ತು 19ರಂದು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಸಮ್ಮೇಳನಕ್ಕೆ ಚಾಮರಾಜನಗರ ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ತಾಲೂಕು ಬ್ರಾಹ್ಮಣ ಸಂಘದ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ, ಪ್ರತಿಯೊಬ್ಬರು ಬೆಂಗಳೂರಿನಲ್ಲಿ ನಡೆಯುವ ಬ್ರಾಹ್ಮಣ ಸಮ್ಮೇಳನಕ್ಕೆ ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ಆಹ್ವಾನ ಪತ್ರಿಕೆ ನೀಡಿ ಆಮಂತ್ರಿಸಲಾಯಿತು.
ಎರಡು ದಿನಗಳ ಕಾಲ ಅತ್ಯಂತ ವೈಭವ ಹಾಗೂ ವಿಚಾರಪೂರಿತ ಸಮ್ಮೇಳನದಲ್ಲಿ ರಾಜ್ಯದ ಹಳ್ಳಿ ಹಳ್ಳಿಗಳಿಂದಲೂ ಬ್ರಾಹ್ಮಣರು ಆಗಮಿಸಿ ಸಂಘಟನೆಯನ್ನು ಬಲಪಡಿಸಬೇಕು ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಜಿಎಂ ಹೆಗಡೆ ತಿಳಿಸಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ದೇಶದ ಹಾಗೂ ನಾಡಿನ ವಿವಿಧ ಮಠಾಧಿಪತಿಗಳು ರಾಜಕೀಯ ಮುಖಂಡರು ಶಿಕ್ಷಣ ತಜ್ಞರು ಉದ್ಯಮಿಗಳು ,ಮಹಿಳಾ ಸಾಧಕರು, ವೇದ ಬ್ರಹ್ಮ ಶ್ರೀಗಳು, ಆಧ್ಯಾತ್ಮ ಸಾಧಕರು, ಯುವ ಸಾಧಕರು ವಿಶೇಷವಾದ ಚಿಂತನಾಗೋಷ್ಠಿಗಳು ಆಹಾರ ಮೇಳಗಳು ,ಉದ್ಯಮ ಹಾಗೂ ಶಿಕ್ಷಣದ ಯೋಜನೆಗಳು , ಹಲವು ವಿಚಾರಪೂರಿತವಾದ ಗೋಷ್ಠಿಗಳು ನಡೆಯಲಿದೆ. ಸಂಘಟನೆ, ಸ್ವಾವಲಂಬನೆ, ಸಂಸ್ಕಾರದ ಮೂಲಕ ನಮ್ಮ ಸಮಾಜದ ಬಲವನ್ನು ಒಗ್ಗೂಡಿಸೋಣ ಎಂದರು.
ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಹೆಚ್ ವಿ ನಾಗರಾಜ್ ಮಾತನಾಡಿ ಐತಿಹಾಸಿಕ ಕರ್ನಾಟಕ ರಾಜ್ಯ ಬ್ರಾಹ್ಮಣ ಸಮ್ಮೇಳನ ವಿಶೇಷವಾಗಿ ಗಡಿ ಜಿಲ್ಲೆಯ ಎಲ್ಲಾ ಬ್ರಾಹ್ಮಣರು ಆಗಮಿಸಬೇಕು. ಮುಂದಿನ ಪೀಳಿಗೆಗೆ ಬ್ರಾಹ್ಮಣ್ಯದ ಮಹತ್ವವನ್ನು ತಿಳಿಸುವ ಕಾರ್ಯವನ್ನು ನಾವೆಲ್ಲರೂ ಮಾಡೋಣ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದ್ದು ಪ್ರತಿ ಮನೆಯಿಂದಲೂ ಸರ್ವರು ಆಗಮಿಸಬೇಕೆಂದು ಮನವಿ ಮಾಡಿದರು.
ಹಿರಿಯ ನಾಗರಿಕರಾದ ರಾಜಗೋಪಾಲ್, ಬ್ರಾಹ್ಮಣ ಸಂಘದ ರಾಧಾಕೃಷ್ಣ ,ಸತೀಶ್ ,ಕೇಶವಮೂರ್ತಿ, ಸುಮಂತ್ ರಘುನಾಥ್, ಬ್ರಾಹ್ಮಿ ಮಹಿಳಾ ಸಂಘಟನೆಯ ವತ್ಸಲ ರಾಜಗೋಪಾಲ್ , ಕುಸುಮ ಋಗ್ವೇದಿ, ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ, ಸಾನಿಕ , ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.