ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಲಿಯೋರಾ ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆ ವತಿಯಿಂದ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಮಳಿಗೆಯ ಕರ್ನಾಟಕ ರೀಜನಲ್ ಮ್ಯಾನೇಜರ್ ರಾಬಿನ್ ಪೀಟರ್ ತಿಳಿಸಿದರು.
ಪಟ್ಟಣದ ಬೆಟ್ಟದಪುರ ರಸ್ತೆಯಲ್ಲಿರುವ ಲಿಯೋರಾ ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಯಲ್ಲಿ ನೂತನ ಕೊಡುಗೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಿನ್ನಾಭರಣ ಕೊಳ್ಳುವ ಗ್ರಾಹಕರಿಗಾಗಿ ನಮ್ಮ ಲಿಯೋರಾ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಉತ್ತಮ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದ್ದು ಗ್ರಾಹಕರು ಮಳಿಗೆಗೆ ಭೇಟಿ ನೀಡಿ ವಿವಿಧ ಆಕರ್ಷಕ ಕೊಡುಗೆಗಳ ಮಾಹಿತಿ ಪಡೆದು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಈ ಸಂದರ್ಭ ಸಿಬ್ಬಂದಿ ಅಭಿ ಅರಸ್, ಸಂಜಯ್, ಮಂಜುನಾಥ್, ದಿಲೀಪ್, ಸುಮಂತ್, ರೋಜೇಶ್ವರಿ, ನಿಶಾ, ಕಾವ್ಯ, ಸಿಂಚನ, ಸಜೀನಾ, ಶಿಲ್ಪ ಮತ್ತು ಗ್ರಾಹಕರು ಇದ್ದರು.