Saturday, April 19, 2025
Google search engine

Homeರಾಜ್ಯಮುಡಾ ಕೇಸ್ ನಲ್ಲಿ ಕ್ಲೀನ್ ಚಿಟ್ ಕೊಡೋ ಪ್ರಯತ್ನ ನಡೆಯುತ್ತಿದೆ ಅನ್ನಿಸುತ್ತೆ: ಆರ್ ಅಶೋಕ್

ಮುಡಾ ಕೇಸ್ ನಲ್ಲಿ ಕ್ಲೀನ್ ಚಿಟ್ ಕೊಡೋ ಪ್ರಯತ್ನ ನಡೆಯುತ್ತಿದೆ ಅನ್ನಿಸುತ್ತೆ: ಆರ್ ಅಶೋಕ್

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 300 ಕೋಟಿ ಮೌಲ್ಯ ಆಸ್ತಿ ಜಪ್ತಿ ಮಾಡಿದೆ. ಕೂಡಲೇ ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಲೋಕಾಯುಕ್ತದವರು ಮುಡಾ ಕೇಸ್ ನಲ್ಲಿ ಕ್ಲೀನ್ ಚಿಟ್ ಕೊಡೋ ಪ್ರಯತ್ನ ಮಾಡ್ತಿದ್ದಾರೆ ಅನ್ನಿಸುತ್ತೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಬಗೆದಷ್ಟು ಹೊರಗೆ ಬರುತ್ತಿದೆ. ನಾನು ಅರ್ಜಿ ಹಾಕಿ ಎರಡು ತಿಂಗಳು ಆದರೂ 50:50 ಅಡಿ ಎಷ್ಟು ಸೈಟ್ ಕೊಟ್ಟಿದ್ದೀರಾ ಅಂತ ಮುಡಾ ಇನ್ನು ಮಾಹಿತಿ ಕೊಟ್ಟಿಲ್ಲ. ಇದೆಲ್ಲವನ್ನು ನೋಡಿದರೆ ಲೋಕಾಯುಕ್ತಗೆ ಈ ಕೇಸ್ ತನಿಖೆ ಮಾಡೋಕೆ ಆಸಕ್ತಿ ಇದ್ದಂತೆ ಕಾಣ್ತಿಲ್ಲ ಎಂದು ಹೇಳಿದರು.

ಇಡಿ ಲೋಕಾಯುಕ್ತಗೆ ದಾಖಲೆಗಳನ್ನು ಕೊಟ್ಟರೂ ಅದನ್ನ ಬಳಸಿಕೊಳ್ಳಲಿಲ್ಲ. ಲೋಕಾಯುಕ್ತ ಕೂಡಾ ಇಡಿ ರೀತಿ ಸೀಜ್ ಮಾಡಿಲ್ಲ ಯಾಕೆ? ಇದೆಲ್ಲವನ್ನೂ ನೋಡಿದರೆ ಲೋಕಾಯುಕ್ತ ಪೊಲೀಸರು ಪ್ರಮೋಷನ್ ಪಡೆಯೋಕೆ ಹೀಗೆಲ್ಲ ಮಾಡ್ತಿದ್ದಾರೆ ಅಂತ ಅನ್ನಿಸುತ್ತೆ. ಲೋಕಾಯುಕ್ತಗೆ ಯಾರ ಒತ್ತಡ ಇದೆ. ಯಾರ ಕೈವಾಡ ಇದೆ ಗೊತ್ತಿಲ್ಲ. ಮೊದಲ ದಿನದಿಂದಲೂ ನಾವು ಇದನ್ನೇ ಹೇಳ್ತಿದ್ದೇವೆ. ಹೀಗಾಗಿ ನಾವು ಮುಡಾ ಕೇಸ್ ಅನ್ನ ಸಿಬಿಐ ತನಿಖೆಗೆ ಕೊಡಿ ಅಂತ ಹೇಳ್ತಿದ್ದೇವೆ. ಈಗಲೂ ಮುಡಾ ಕೇಸ್ ಅನ್ನ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular