ಎಚ್ ಡಿ ಕೋಟೆ: ಎಚ್ ಡಿ ಕೋಟೆ ಪಟ್ಟಣ ಸಮೀಪದ ಹೆಗಡಾಪುರ ಗ್ರಾಮದ ಬಳಿ ರೈತರ ಜಮೀನಿನಲ್ಲಿಹುರುಳಿಗೆ ಸಿಲುಕಿ ಹೆಣ್ಣು ಚಿರತೆ ಸಾವಿನ ಘಟನೆ ನಡೆದಿದೆ.
ಹೆಗಡಾಪುರ ಗ್ರಾಮದ ಸಮೀಪದಲ್ಲಿರುವ ದೇವ ನಾಯಕ ರವರ ಜಮೀನಿನಲ್ಲಿ ಬೇಟೆ ಮಾಡಲು ಹಾಕಲಾಗಿದ್ದ ಉರುಳು ಳಿಗೆ ನೆನ್ನೆ ರಾತ್ರಿ ಎರಡು ವರ್ಷದ ಹೆಣ್ಣು ಚಿರತೆ ಸಿಲುಕಿಕೊಂಡು ಸಾವನಪ್ಪಿದೆ. ಇಂದು ಬೆಳಿಗ್ಗೆ ಅರಣ್ಯ ಅಧಿಕಾರಿಗಳಿಗೆ ವಿಚಾರ ತಿಳಿಯುತ್ತಿದ್ದಂತೆ ಬಿ ಎಫ್ ಓ ಬಸವರಾಜು ,ಎಸಿಎಫ್ ಲಕ್ಷ್ಮಿಕಾಂತ್ , ಆರ್ ಎಫ್ ಪ್ರಸನ್ನ ಕುಮಾರ್ ಅವರು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಜಮೀನಿನ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಮೃತ ಚಿರತೆಯನ್ನು ಪಟ್ಟಣದ ಅರಣ್ಯ ಕಚೇರಿಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಿದರು.