Saturday, April 19, 2025
Google search engine

HomeUncategorizedರಾಷ್ಟ್ರೀಯಗಣರಾಜ್ಯೋತ್ಸವ ಪರೇಡ್ ಗೆ ಚಾಮರಾಜನಗರದ ಕೃಷಿಕ ದಂಪತಿ ಭಾಗಿ

ಗಣರಾಜ್ಯೋತ್ಸವ ಪರೇಡ್ ಗೆ ಚಾಮರಾಜನಗರದ ಕೃಷಿಕ ದಂಪತಿ ಭಾಗಿ

ಚಾಮರಾಜನಗರ: ಈ ಬಾರಿಯ ಗಣರಾಜ್ಯೋತ್ಸವ ಪರೇಡ್​ ವಿಶೇಷವಾಗಿರಲಿದ್ದು ದೇಶದ 1,500ಕ್ಕೂ ಅಧಿಕ ರೈತರನ್ನು ಆಹ್ವಾನಿಸಲಾಗಿದೆ.

ಚಾಮರಾಜನಗರ ಜಿಲ್ಲೆಯಿಂದ ಗುಂಡ್ಲುಪೇಟೆ ತಾಲೂಕು ವಡ್ಡಗೆರೆ ಗ್ರಾಮದ ಕೃಷಿಕ ದಂಪತಿ ಚಿನ್ನಸ್ವಾಮಿ ವಡ್ಡಗೆರೆ ,ಪತ್ನಿ ಕೆ.ಎಸ್. ಗಿರಿಕನ್ಯೆ ದೆಹಲಿಯ ಕರ್ತವ್ಯಪಥದಲ್ಲಿ ಆಯೋಜಿಸಲಾಗಿರುವ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಭಾಗವಾಗಲಿದ್ದಾರೆ.

ಈ ವಿಶೇಷ ಕಾರ್ಯಕ್ರಮದಲ್ಲಿ, ಕೇಂದ್ರ ಸರ್ಕಾರವು ನಡೆಸುತ್ತಿರುವ ವಿವಿಧ ಕೃಷಿ ಮತ್ತು ರೈತ ಕಲ್ಯಾಣ ಯೋಜನೆಗಳ ಲಾಭವನ್ನು ಪಡೆಯುತ್ತಿರುವ ರೈತರನ್ನು ಆಹ್ವಾನಿಸಲಾಗಿದೆ.

ಕೃಷಿಕರು ಮತ್ತು ಅವರ ಪತ್ನಿಯರನ್ನು ಕೇಂದ್ರ ಸರ್ಕಾರ ವಿಶೇಷ ಅತಿಥಿಗಳಾಗಿ ಆಹ್ವಾನಿಸಿದ್ದು,ಅವರನ್ನು ವಿಮಾನದ ಮೂಲಕ ನವದೆಹಲಿಗೆ ಕರೆದೊಯ್ಯಲಾಗುತ್ತದೆ.

ಕೇಂದ್ರ ಸರಕಾರದ ಜಲಶಕ್ತಿ (ಅಟಲ್ ಭೂ ಜಲ್ ಯೋಜನ ) ಸಚಿವಾಲಯದಿಂದ ಈ ಕೃಷಿಕ ದಂಪತಿಯನ್ನು ಆಹ್ವಾನಿತ ಅತಿಥಿಗಳಾಗಿ ನಾಮನಿರ್ದೇಶನ ಮಾಡಲಾಗಿದೆ .

ರಾಜ್ಯದಿಂದ ಆಯ್ಕೆಯಾದ ಕೃಷಿಕ ದಂಪತಿ ಜನವರಿ 25 ರಂದು ವಿಮಾನದ ಮೂಲಕ ದೆಹಲಿಗೆ ಹೋಗುತ್ತಾರೆ ಮತ್ತು 28 ರಂದು ಹಿಂತಿರುಗುತ್ತಾರೆ.

RELATED ARTICLES
- Advertisment -
Google search engine

Most Popular