Saturday, April 19, 2025
Google search engine

Homeರಾಜ್ಯಸುದ್ದಿಜಾಲಒಕ್ಕಲಿಗ ಸಮುದಾಯದ ಸಂಘಟನೆ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು: ಕುಪ್ಪಹಳ್ಳಿ ಸೋಮಶೇಖರ್

ಒಕ್ಕಲಿಗ ಸಮುದಾಯದ ಸಂಘಟನೆ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು: ಕುಪ್ಪಹಳ್ಳಿ ಸೋಮಶೇಖರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಮುದಾಯದ ಸಂಘಟನೆ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸಾಲಿಗ್ರಾಮ ತಾಲೂಕು ವಿಶ್ವ ಒಕ್ಕಲಿಗರ ಸಂಘದ ಅಧ್ಯಕ್ಷ ಕುಪ್ಪಹಳ್ಳಿ ಸೋಮಶೇಖರ್ ಹೇಳಿದರು.

ಅವರು ಪಟ್ಟಣದಲ್ಲಿ ಸಂಘದ ನೂತನ ಕಚೇರಿಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ವಿವಿಧ ಗ್ರಾಮಗಳಲ್ಲಿರುವ ಒಕ್ಕಲಿಗ ಸಮುದಾಯದ ಜನರನ್ನು ಒಗ್ಗೂಡಿಸುವ ಕೆಲಸವನ್ನು ಮಾಡುವುದರೊಂದಿಗೆ ಎಲ್ಲಾ ಭಾಗಗಳಲ್ಲಿರುವ ಸಮಾಜದ ಜನರನ್ನು ಸಂಘದ ಸದಸ್ಯರುಗಳನ್ನಾಗಿ ಮಾಡಿಸುವ ಕೆಲಸವನ್ನು ಮಾಡಲಾಗುವುದು. ಆ ಮೂಲಕ ತಾಲೂಕಿನಲ್ಲಿ ವಿಶ್ವ ಒಕ್ಕಲಿಗರ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವ ಕೆಲಸವನ್ನು ಸಂಘದ ಎಲ್ಲಾ ಪದಾಧಿಕಾರಿಗಳು, ಆಡಳಿತ ಮಂಡಳಿಯವರು ಹಾಗೂ ಸಮುದಾಯದ ಮುಖಂಡರುಗಳ ಸಹಕಾರದೊಂದಿಗೆ ಮಾಡಲಾಗುವುದು. ಸಂಘಟನೆಯು ಮಾಡುವಂತಹ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಸರ್ವರೂ ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಾ.ರಾ.ಗುರುಪ್ರಸಾದ್, ಸಹ ಕಾರ್ಯದರ್ಶಿ ಟ್ರ್ಯಾಕ್ಟರ್ ಅನಂತ, ಖಜಾಂಚಿ ಎಸ್.ಎಲ್.ನಾಗೇಶ್, ಮುಖಂಡರುಗಳಾದ ಪಾಪಣ್ಣ, ಸಾ.ರಾ.ಸತೀಶ್, ಬಾಬು, ಜ್ಯೋತಿ ವೆಂಕಟೇಶ್, ವಾಸು, ಡೈರಿಸೀನಣ್ಣ, ಮಧು, ಎಸ್.ಕುಮಾರ, ವ್ಯಾನ್ ಮಂಜು, ಗಿರೀಶ್ ಗೌಡ, ಎಸ್.ಬಿ.ಶೇಖರ್ ಸುನಿಲ್, ಕಿಟ್ಟಿ, ಶೇಖರ್, ವೇಣು, ಗೋಪಾಲ್, ತುಳಸಿ, ರಾಜಣ್ಣ, ಮಂಜುನಾಥ್, ಬಿ.ಆರ್.ಕುಮಾರ್, ದಿನೇಶ್, ಬೊಮ್ಮರಾಯಿಗೌಡ ಸೇರಿದಂತೆ ಹಲವರು ಇದ್ದರು.

RELATED ARTICLES
- Advertisment -
Google search engine

Most Popular