Sunday, April 20, 2025
Google search engine

Homeಅಪರಾಧಮಂಡ್ಯದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕಮೀಷನ್ ದಂಧೆ!: ಗುತ್ತಿಗೆದಾರ - ಕಾರ್ಯಪಾಲಕ ಅಭಿಯಂತರ ಆಡಿಯೋ ವೈರಲ್

ಮಂಡ್ಯದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕಮೀಷನ್ ದಂಧೆ!: ಗುತ್ತಿಗೆದಾರ – ಕಾರ್ಯಪಾಲಕ ಅಭಿಯಂತರ ಆಡಿಯೋ ವೈರಲ್

ಮಂಡ್ಯ: ಮಂಡ್ಯದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ನಡೀತಾ ಇದೆಯಂತೆ ಕಮೀಷನ್ ದಂಧೆ! ಇಂಥದ್ದೊಂದು ಪ್ರಶ್ನೆ ಈಗ ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಮಂಡ್ಯ ಪಿಡಬ್ಲ್ಯೂಡಿ ಇಲಾಖೆಯ ಗುತ್ತಿಗೆದಾರ ಮತ್ತು ಕಾರ್ಯ ಪಾಲಕ ಅಭಿಯಂತರ ಆಡಿಯೋ ಸಂಭಾಷಣೆ.

ಯಾವುದೇ ಕಾಮಗಾರಿಯ  ಬಿಲ್  ಪಾಸ್ ಗೆ ಕಾರ್ಯ ಪಾಲಕ ಅಭಿಯಂತರರಿಗೆ 12 ರಿಂದ 15 ಪರ್ಸೆಂಟ್ ಕಮೀಷನ್ ನೀಡಬೇಕೆಂದು ಸ್ಫೋಟಕ ಮಾಹಿತಿ ಆಡಿಯೋದಲ್ಲಿ ಬಯಲಾಗಿದೆ.

ಮಂಡ್ಯ ಜಿಲ್ಲಾ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಹರ್ಷ ವಿರುದ್ದ ಕಮೀಷನ್ ದಂಧೆ ಆರೋಪ ಕೇಳಿಬಂದಿದ್ದು, ಗುತ್ತಿಗೆದಾರನ ರಮೇಶ್ ಜೊತೆ ಮಾತನಾಡಿರುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

3 ಕೋಟಿ ಲಂಚ ಕೊಟ್ಟು ಮಂಡ್ಯಕ್ಕೆ ಪೋಸ್ಟಿಂಗ್ ಹಾಕಿಸಿಕೊಂಡಿರುವ ಬಗ್ಗೆಯೂ ಕೂಡ  ಕಾರ್ಯಪಾಲಕ ಅಭಿಯಂತರ ಆಡಿಯೋದಲ್ಲಿ ಹೇಳಿದ್ದಾನೆ.

ಆದರೆ ಗುತ್ತಿಗೆದಾರನ ವೈರಲ್ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಲು ಅಧಿಕಾರಿ ಉದ್ದಟತನ ತೋರಿದ್ದಾನೆ. ಮಾತ್ರವಲ್ಲದೇ ಕ್ಯಾಮೆರಾ ಕಾಣ್ತಾ ಇದ್ದಂತೆ ಕಚೇರಿಯಿಂದ ಕಾಲ್ಕಿತ್ತು ಅಧಿಕಾರಿ ಎಸ್ಕೇಪ್ ಆಗಿದ್ದಾರೆ.

ಇನ್ನು  ಗುತ್ತಿಗೆದಾರನೊಬ್ಬ ತನ್ನ ಬಿಲ್ ಪಾವತಿಸಿ ಎಂದು ಮನವಿ ಮಾಡುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ  ಸೆರೆಯಾಗಿದ್ದು, ಅಧಿಕಾರಿಯ ಕಮಿಷನ್ ದಂಧೆಯ ಕರ್ಮಕಾಂಡವನ್ನು ಬಡಗುತ್ತಿಗೆದಾರ ಬಿಚ್ಚಿಟ್ಟಿದ್ದಾರೆ.

ಇನು ವೈರಲ್ ಆಡಿಯೋ ಆಧರಿಸಿ ಸಮಗ್ರ ತನಿಖೆ ನಡೆಸಲು ಆರ್‌ ಟಿಐ ಕಾರ್ಯಕರ್ತ ಗೋವಿಂದರಾಜು ಲೋಕಾಯುಕ್ತಕ್ಕೆ ಆಗ್ರಹಿಸಿದ್ದಾರೆ.

ಭ್ರಷ್ಟ ಅಧಿಕಾರಿ ವಿರುದ್ಧ ತನಿಖೆಗೆ ಒತ್ತಾಯಿಸಿ ಜುಲೈ 25 ರಿಂದ ಪಿಡಬ್ಲ್ಯೂಡಿ ಕಚೇರಿ ಮುಂದೆ ಧರಣಿ ಕೂರಲು ಸಿದ್ಧತೆ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES
- Advertisment -
Google search engine

Most Popular