ಚಾಮರಾಜನಗರ: ಯಳಂದೂರು ಪಟ್ಟಣದ ಕೆಕೆ ರಸ್ತೆಯಲ್ಲಿರುವ ಕರ್ನಾಟಕ ಸೇವಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್ ಶುಕ್ರವಾರ ಭೇಟಿ ನೀಡಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಾರ್ವಜನಿಕರಿಂದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದವರು ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೆನ್ನೆಯಿಂದ ಈ ಯೋಜನೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು ಕೆಲವೆಡೆ ಸರ್ವರ್ ಸಮಸ್ಯೆ ಇದೆ. ಸದ್ಯದಲ್ಲೇ ಎಲ್ಲಾ ಸಮಸ್ಯೆಯೂ ನಿವಾರಣೆಯಾಗಲಿದೆ, ಸಾರ್ವಜನಿಕರು ಸಾವಧಾನದಿಂದ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬೇಕು. ಈ ಬಗ್ಗೆ ಯಾವುದಾದರೂ ದೂರು ಇದ್ದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿ ಕಚೇರಿ, ಅಥವಾ ಕಂದಾಯ ಇಲಾಖೆಯ ಕಚೇರಿಗೆ ದೂರನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿ ಮಹೇಶ್ ಕುಮಾರ್, ತಹಸಿಲ್ದಾರ್ ಶಿವರಾಜ್, ಶಿರಸ್ತೆದಾರ್ ಶಾಂತಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.