Saturday, April 19, 2025
Google search engine

Homeರಾಜ್ಯಸುದ್ದಿಜಾಲಕಂದೇಗಾಲದ ಒಂಟಿ ಗುಡ್ಡದಲ್ಲಿ ಚಿರತೆ ಸೆರೆ

ಕಂದೇಗಾಲದ ಒಂಟಿ ಗುಡ್ಡದಲ್ಲಿ ಚಿರತೆ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ಕಂದೇಗಾಲ ಗ್ರಾಮದ ಒಂಟಿ ಗುಡ್ಡದ ಬಫರ್ ಜೋನ್ ವ್ಯಾಪ್ತಿಯಲ್ಲಿ ಸುಮಾರು ೩ರಿಂದ ೪ ವರ್ಷದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

ಕಂದೇಗಾಲದ ಗ್ರಾಮದ ಒಂಟಿಗುಡ್ಡದ ಶಿವಪ್ಪ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸೆರೆಯಾಗಿದ್ದು, ಗ್ರಾಮದ ಸುತ್ತಮುತ್ತಲಿನ ಜಾನುವಾರುಗಳ ಮೇಲೆ ಈ ಚಿರತೆ ನಿರಂತರವಾಗಿ ದಾಳಿ ಮಾಡಿ ಕೊಂದು ಹಾಕುತಿತ್ತು. ಇದರಿಂದ ರೈತರು ಭಯಭೀತರಾಗುವ ಜೊತೆಗೆ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತಿದ್ದರು. ಇದೀಗ ಚಿರತೆ ಬೋನಿಗೆ ಬಿದ್ದಿರುವುದರಿಂದ ರೈತರ ಆತಂಕ ದೂರವಾಗಿದೆ.

RELATED ARTICLES
- Advertisment -
Google search engine

Most Popular