Saturday, April 19, 2025
Google search engine

Homeರಾಜ್ಯಸುದ್ದಿಜಾಲರಕ್ತದಾನ ಮಾಡಿ ಜನರ ಜೀವ ಉಳಿಸುವುದು ಪುಣ್ಯದ ಕೆಲಸ: ಬಸವರಾಜ ಬೊಮ್ಮಾಯಿ

ರಕ್ತದಾನ ಮಾಡಿ ಜನರ ಜೀವ ಉಳಿಸುವುದು ಪುಣ್ಯದ ಕೆಲಸ: ಬಸವರಾಜ ಬೊಮ್ಮಾಯಿ

ಗದಗ: ರಕ್ತದಾನ ಮಾಡಿ ಜನರ ಜೀವ ಉಳಿಸುವ ಪುಣ್ಯದ ಕೆಲಸವನ್ನು ಔಷಧ ವ್ಯಾಪಾರಿಗಳ ಸಂಘ ಮಾಡುತ್ತಿರುವುದು ಅಭಿನಂದನೀಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಗದಗ ಶಹರದ ರೋಟರಿ ಸೆಂಟ್ರಲ್ ಹಾಲ್ ನಲ್ಲಿ ಗದಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ಹಾಗೂ ರೋಟರಿ ಗದಗ ಸೆಂಟ್ರಲ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಔಷಧ ವ್ಯಾಪಾರಿಗಳ ಸಂಘ ಪರೋಪಕಾರಿ ಕೆಲಸ ಮಾಡುತ್ತಿದೆ. ಕಾಯಕದಲ್ಲಿ ಹಲವಾರು ಕಾಯಕಗಳಿವೆ ಅದರಲ್ಲಿ ವೈದ್ಯ ಕಾಯಕ ನೋಬಲ್ ಪ್ರೊಪೇಷನ್ ಅಂದರೆ ಮಾನವೀಯತೆಯಿಂದ ಕೂಡಿರುವ ಕಾಯಕ, ಅದಕ್ಕೆ ಶಕ್ತಿ ತುಂಬುವ ಕಾಯಕ ಔಷಧಿ ವ್ಯಾಪಾರ. ಔಷಧಿ ವ್ಯಾಪಾರ ಇಲ್ಲದಿದ್ದರೆ ವೈದ್ಯ ವೃತ್ತಿ ನಡೆಯುವುದಿಲ್ಲ‌ ಅಂತ ಪುಣ್ಯದ ಕೆಲಸದಲ್ಲಿ ನೀವು ತೊಡಗಿದ್ದೀರಿ ಎಂದರು.

ನಿಮಗೂ ಡಾಕ್ಟರ್ ನಡುವೆ ಸಂಬಂಧ ಇದೆ. ನೀವು ವೈದ್ಯರಿಗೆ ಬೇಕು, ವೈದ್ಯರು ನಿಮಗೆ ಬೇಕು. ಡಾಕ್ಟರ ಬರಹ ಔಷಧ ಅಂಗಡಿಯವರಿಗೆ ಮಾತ್ರ ಅರ್ಥ ಆಗುತ್ತದೆ. ಒಂದೊಂದು ವೃತ್ತಿಯವರ ನಡುವೆ ಒಂದೊಂದು ರೀತಿಯ ಸಂಬಂಧ ಇರುತ್ತವೆ‌. ವಕೀಲರು ಮತ್ತು ಕಕ್ಷಿದಾರರ ನಡುವೆ ಒಂದು ರೀತಿಯ ಸಂಬಂಧ ಇರುತ್ತದೆ. ರಾಜಕಾರಣಿಗಳು ಮತ್ತು ಜನರ ನಡುವೆ ಒಂದು ರೀತಿಯ ಸಂಬಂಧ ಇರುತ್ತದೆ. ರಾಜಕಾರಣಿ ಆ ವ್ಯಕ್ತಿಯನ್ನು ನೋಡಿದ ಕೂಡಲೆ ಆತ ಏತಕ್ಕೆ ಬಂದಿದ್ದಾನೆ ಎಂದು ಗೊತ್ತಾಗುತ್ತದೆ ಎಂದರು.

ರಕ್ತದಾನ ಮಾಡುವ ಮೂಲಕ ತಾವು ಬಹಳ ಒಳ್ಳೆಯ ಸೇವೆ ಸಲ್ಲಿಸುತ್ತಿದ್ದಿರಿ, ಜನರ ಜೀವ ಉಳಿಸುತ್ತಿದ್ದೀರಿ, ಸಾಮಾಜಿಕ ಜವಾಬ್ದಾರಿ ಮುಖ್ಯವಾಗಿದೆ. ತುರ್ತು ಸಂದರ್ಭದಲ್ಲಿ ಔಷಧಿ ಎಷ್ಟು ಮುಖ್ಯವೋ ರಕ್ತದಾನವೂ ಅತ್ಯಂತ ಮುಖ್ಯವಾಗಿದೆ. ನಿಮ್ಮ ಕಾರ್ಯ ಯಶಸ್ವಿಯಾಗಲಿ. ಔಷಧಿ ಭವನ ಕಟ್ಟುವ ತಮ್ಮ ಕಾರ್ಯಕ್ಕೆ ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಶಾಸಕರಾದ ಸಿ.ಸಿ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ, ಗದಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ರಾಮನಗೌಡ ದಾನಪ್ಪಗೌಡ್ರ, ತಾತನಗೌಡ ಪಾಟೀಲ್, ನಗರಸಭೆ ಮಾಜಿ ಅಧ್ಯಕ್ಷರಾದ ಉಷಾ ದಾಸರ ಸೇರಿದಂತೆ ಸಂಸ್ಥೆಯ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular