ಚಾಮರಾಜನಗರ: ತಾಲೂಕು ಅಮಚವಾಡಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ರಾಷ್ಟ್ರೀಯ ಮತದಾರ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ಪ್ರಾಚಾರ್ಯರಾದ ಶಿವನಂಜಪ್ಪ ರವರು ಬೋಧಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹಾಗೂ ಮತದಾನಕ್ಕೆ ಅಪಾರ ಮಹತ್ವವಿದೆ. ಭಾರತೀಯ ಚುನಾವಣಾ ಆಯೋಗ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜನವರಿ 25ರಂದು ಎಲ್ಲೆಡೆ ಆಚರಿಸುತ್ತಿದೆ.
ಮತದಾನವನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಚಲಾಯಿಸಬೇಕು ಎಂದರು. ಹಿರಿಯ ಉಪನ್ಯಾಸಕರಾದ ಆರ್ ಮೂರ್ತಿ, ಸುರೇಶ್ ಎನ್ ಋಗ್ಬೇದಿ, ಬಸವಣ್ಣ ,ರಮೇಶ್ ಹಾಗೂ ಸುರೇಶ್ ಉಪಸ್ಥಿತರಿದ್ದರು.