Saturday, April 19, 2025
Google search engine

Homeರಾಜ್ಯಮುಡಾ ಅಕ್ರಮದಲ್ಲಿ 50:50 ದಾಖಲೆ ತೋರಿಸಿದರೆ ಜೈಲಿಗೆ ಹೋಗ್ತೇನೆ : ಸಿಎಂ ಸಿದ್ಧರಾಮಯ್ಯಗೆ ಸ್ನೇಹಮಯಿ ಕೃಷ್ಣ...

ಮುಡಾ ಅಕ್ರಮದಲ್ಲಿ 50:50 ದಾಖಲೆ ತೋರಿಸಿದರೆ ಜೈಲಿಗೆ ಹೋಗ್ತೇನೆ : ಸಿಎಂ ಸಿದ್ಧರಾಮಯ್ಯಗೆ ಸ್ನೇಹಮಯಿ ಕೃಷ್ಣ ಸವಾಲು

ಧಾರವಾಡ : ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆಗೆ ಕೋರಿ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇಂದು ಹೈಕೋರ್ಟಿನಲ್ಲಿ ವಾದ ಪ್ರತಿವಾದ ನಡೆಯಿತು. ಸಿಎಂ ಪರವಾಗಿ ಕಪಿಲ್ ಸಿಬಲ್, ಅಭಿಷೇಕ್ ಮನಸಿಂಗ್ವಿ, ಪ್ರೊ. ರವಿವರ್ಮ ಕುಮಾರ್ ವಾದಿಸಿದರೆ, ಅತ್ತ ದೂರುದಾರ ಸ್ನೇಹಮಯಿ ಕೃಷ್ಣ ಅವರ ಪರವಾಗಿ ಮಣಿಂದರ್ ಸಿಂಗ್ ಅವರು ವಾದಿಸಿದರು. ಈ ವೇಳೆ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿ ಆದೇಶಿಸಿದೆ.

ಈ ವಿಚಾರವಾಗಿ, ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದು, 50:50 ಅನುಪಾತ ದಾಖಲೆ ತೋರಿಸಿದರೆ ಜೈಲಿಗೆ ಹೋಗುತ್ತೇನೆ. ಈ ಒಂದು 50:50 ಅನುಪಾತ ದಾಖಲೆ ತೋರಿಸಿದರೆ ನಾನೇ ಹೋಗುತ್ತೇನೆ. ಈ ಒಂದು ಅಧಿಸೂಚನೆ ಉಲ್ಲೇಖ ಇಲ್ಲ. ನನ್ನ ಮೇಲೆ ಯಾವ ಕೇಸ್ ಬೇಡ ನಾನೇ ಸ್ವತಹ ಜೈಲಿಗೆ ಹೋಗುತ್ತೇನೆ. ಸಿಎಂ ಗೆ ಇದು ನನ್ನ ಬಹಿರಂಗ ಸವಾಲು.

UDD-118 2024 ಉಲ್ಲೇಖಿಸಿ 50:50 ಅನುಪಾತ ಅಂತಾರೆ. ಹಾಗಾದ್ರೆ ಆ ಆದೇಶ ತೋರಿಸಲಿ ಅಕಸ್ಮಾತ ದಾಖಲೆ ತೋರಿಸಿದರೆ ನಾನೆ ಸ್ವತಃ ಜೈಲಿಗೆ ಹೋಗ್ತೇನೆ ಎಂದು ಸ್ನೇಹಮಯಿ ಕೃಷ್ಣ ಇದೇ ವೇಳೆ ಸವಾಲು ಹಾಕಿದರು. ತಪ್ಪು ಮಾಡಿಲ್ಲ ಅಂದರೆ ಇವರಿಗ್ಯಾಕೆ ಭಯ? ಇವತ್ತಿನ ವಾದ ವಿವಾದ ನೋಡಿದರೆ ಪ್ರಕರಣ ಸಿಬಿಐಗೆ ಹೋಗುತ್ತದೆ. ಮುಡಾ ಕೇಸ್ ಸಿಬಿಐ ಗೆ ಹೋಗುತ್ತದೆ ಎಂಬ ವಿಶ್ವಾಸವಿದೆ ಎಂದು ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿದರು.

RELATED ARTICLES
- Advertisment -
Google search engine

Most Popular