ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ರಾ.ಹೆ.66ರ ಜೆಪ್ಪಿನಮೊಗರು-ಎಕ್ಕೂರು ಬಳಿ ಗೋದಾಮಿನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಈ ಗೋದಾಮಿನಲ್ಲಿ ಗುಜರಿ ಸಾಮಾಗ್ರಿಗಳು, ಸೆಕೆಂಡ್ ಹ್ಯಾಂಡ್ ಪೀಠೋಪಕರಣ ಸಹಿತ ನಾನಾ ಸಾಮಾಗ್ರಿಗಳನ್ನು ತುಂಬಿಸಿಡಲಾಗಿತ್ತು. ಕಾಣಿಸಿಕೊಂಡ ಬೆಂಕಿಯಿಂದಾಗಿ ಗೋದಾಮಿನಲ್ಲಿದ್ದ ಸಾಮಾಗ್ರಿಗಳು ಸುಟ್ಟುಕರಕಲಾಗಿದೆ.
ಪಕ್ಕದ ಮನೆಗೂ ಸ್ವಲ್ಪ ಹಾನಿಯಾಗಿದ್ದು, ತಕ್ಷಣವೇ ಪಾಂಡೇಶ್ವರ, ಕದ್ರಿ, ಬಂಟ್ವಾಳದ ಅಗ್ನಿಶಾಮಕ ದಳದ ಹಾಗೂ ಎಂಸಿಎಫ್ ಸಿಬ್ಬಂದಿ ವರ್ಗವು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದೆ.