Saturday, April 19, 2025
Google search engine

Homeರಾಜ್ಯಸುದ್ದಿಜಾಲಮಕ್ಕಳ ಬೇಡಿಕೆಗೆ ಸ್ಥಳದಲ್ಲಿಯೇ ಪರಿಹಾರ: ಉಪಾಧ್ಯಕ್ಷ ಮಹೇಶ್ ಆದೇಶ

ಮಕ್ಕಳ ಬೇಡಿಕೆಗೆ ಸ್ಥಳದಲ್ಲಿಯೇ ಪರಿಹಾರ: ಉಪಾಧ್ಯಕ್ಷ ಮಹೇಶ್ ಆದೇಶ

ಅಣ್ಣೂರು ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ಗ್ರಾಮಸಭೆ ಯಶಸ್ವಿ

ಎಚ್. ಡಿ.ಕೋಟೆ: ಅಣ್ಣೂರು ಪಂಚಾಯ್ತಿ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಶಾಲಾ ಕಮಿಟಿ ಸದಸ್ಯರಿಗೆ ಮತ್ತು ಪೋಷಕರಿಗೆ ಆಯೋಜನೆ ಮಾಡಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಕೆ.ಎಡತೊರೆ ಶಾಲೆಯ ವಿಧ್ಯಾರ್ಥಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ನಮ್ಮ ಊರಿನ ವಾಟರ್ ಟ್ಯಾಂಕ್ ಸ್ವಚ್ಚಗೊಳಿಸಿ ಎಂದು ಕೇಳಲಾಗಿ ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಮಹೇಶ್ ಎಡತೊರೆ ಮತ್ತು ಅಭಿವೃದ್ಧಿ ಅಧಿಕಾರಿ ಸಂತೋಷ ನಾಗ್ ಸ್ಥಳದಲ್ಲಿಯೇ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮದ ನೀರಿನ ಟ್ಯಾಂಕ್ ಅನ್ನು ಸ್ವಚ್ಚಗೊಳಿಸಲು ಆದೇಶ ಮಾಡಿದರು. ಮತ್ತೆ ಉಳಿದ ಕಾಂಪೌಂಡ್, ಮೈದಾನ, ಸ್ಮಾರ್ಟ್ ಕ್ಲಾಸ್, ಲೈಬ್ರರಿ ವಿಷಯಗಳ ಬಗ್ಗೆ ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮೊದಲು ಮಕ್ಕಳ ಗ್ರಾಮ ಸಭೆಯ ಬಗ್ಗೆ ಉಮೇಶ್. ಬಿ. ನೂರಲಕುಪ್ಪೆ ಮಾತನಾಡಿ, ರಾಜ್ಯ ಸರ್ಕಾರ ಪ್ರತಿವರ್ಷ ಗ್ರಾಮ ಪಂಚಾಯ್ತಿ ಮೂಲಕ ಮಕ್ಕಳ ಹಕ್ಕುಗಳನ್ನ ರಕ್ಷಿಸುವ ಮಹತ್ವಾಕಾಂಕ್ಷೆಯ ಮಕ್ಕಳ ಗ್ರಾಮ ಸಭೆಯನ್ನು ಸ್ಥಳೀಯಾಗಿ ಸಮಗ್ರ ಅನುಷ್ಠಾನ ಮಾಡುವಂತೆ ನವೆಂಬರ್ ೧೪ ರಿಂದ ಜನವರಿ ೨೬ ರವರೆಗೆ ಎಲ್ಲಾ ಶಾಲೆಯ ಮಕ್ಕಳು ಸಭೆಯಲ್ಲಿ ಭಾಗವಹಿಸಿ ಅವರ ಸಮಸ್ಯೆಯನ್ನು ಚರ್ಚಿಸುವಂತೆ ಅವಕಾಶ ಮಾಡಲಾಗಿದ್ದು ಇದರ ಸದುಪಯೋಗವನ್ನು ಪಡೆಯುವಂತೆ ಮಕ್ಕಳ ಸಲುವಾಗಿ ಇರುವ ಹಕ್ಕುಗಳು ಮತ್ತು ಅದನ್ನ ರಕ್ಷಿಸುವ ವಿಧಾನದ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿದರು.

ಗ್ರಾಮಸಭೆಯಲ್ಲಿ ಉಪಾಧ್ಯಕ್ಷ ಮಹೇಶ್ ಎಡತೊರೆ, ಅಭಿವೃದ್ಧಿ ಅಧಿಕಾರಿ ಸಂತೋಷ ನಾಗ್, ಪೀಪಲ್ ಟ್ರೀ ರುದ್ರಪ್ಪ, ಡ್ರೀಮ್ ಇಂಡಿಯಾ ಸಚ್ಚಿನ್ ರವರು ಮಕ್ಕಳ ಹಕ್ಕು ಶಿಕ್ಷಣ ಮತ್ತು ಮೂಲಭೂತ ಸಮಸ್ಯೆಗಳ ಪರಿಹಾರವಾಗಿ ಮಾತನಾಡಿದರು.

ವೇದಿಕೆಯಲ್ಲಿ ಗ್ರಾ,ಪ, ಅಧ್ಯಕ್ಷೆ ಶ್ರೀಮತಿ ಜಯಮ್ಮ, ಎಸ್ ವಿ ಎಮ್ ಶಿವಲಿಂಗು, ಕಾರ್ಯದರ್ಶಿ ಮೋಹನ್, ಸದಸ್ಯರಾದ ಶಶಿಕುಮಾರ್, ಚಿಕ್ಕಮ್ಮ, ಜಯಲಕ್ಷ್ಮಿ, ಮುಖ್ಯ ಶಿಕ್ಷಕರಾದ ಸುಮ, ಮಂಗಳ, ಸೌಮ್ಯಶ್ರೀ, ಪೂರ್ಣಿಮಾ, ರವಿಕುಮಾರ್, ಕುಳ್ಳಯ್ಯ, ಕಾವ್ಯ, ಮಮತ, ಚೆನ್ನಬಸಪ್ಪ, ಜವರೇಗೌಡ ಮತ್ತು ಶಾಲಾ ಮಂತ್ರಿಮಂಡಲದ ಮಕ್ಕಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular