Saturday, April 19, 2025
Google search engine

Homeರಾಜ್ಯಶೀಘ್ರವೇ ನೀರಿನ ದರ ಹೆಚ್ಚಳ: ಡಿಕೆ ಶಿವಕುಮಾರ್ ಘೋಷಣೆ

ಶೀಘ್ರವೇ ನೀರಿನ ದರ ಹೆಚ್ಚಳ: ಡಿಕೆ ಶಿವಕುಮಾರ್ ಘೋಷಣೆ

ಬೆಂಗಳೂರು: ನಗರದಲ್ಲಿ ವಿದ್ಯುತ್ ದರ ಹೆಚ್ಚಳ, ಹಾಲಿನ ದರ ಹೆಚ್ಚಳ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಶೀಘ್ರವೇ ನೀರಿನ ದರ ಏರಿಕೆ ಮಾಡುವಂತ ಸುಳಿವನ್ನು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು 2014ರಿಂದ ಬೆಂಗಳೂರಲ್ಲಿ ಕಾವೇರಿ ನೀರಿನ ದರವನ್ನು ಹೆಚ್ಚಳ ಮಾಡಿಲ್ಲ. ಹೀಗಾಗಿ ನೀರು ನಿರ್ವಹಣೆಯ ಹೊರೆ ಹೆಚ್ಚಾಗುತ್ತಿದೆ. ಇದರಿಂದ ನಷ್ಟ ಉಂಟಾಗುತ್ತಿದೆ ಎಂದರು.

ತಿಂಗಳಿಗೆ ನೀರಿನ ದರ ಕಡಿಮೆ ಇದ್ದು, ನಿರ್ವಹಣಾ ವೆಚ್ಚ ಹೆಚ್ಚಿರುವ ಕಾರಣ 85 ಕೋಟಿ ಹೊರೆಯಾಗುತ್ತಿದೆ. ವರ್ಷಕ್ಕೆ 1 ಸಾವಿರ ಕೋಟಿ ನಷ್ಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಲ್ಲಿ ಶೀಘ್ರವೇ ನೀರಿನ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದರು.

ಕಳೆಗ ಬಾರಿ ನೀರಿನ ಅಭಾವದಿಂದ ದೊಡ್ಡ ಸಮಸ್ಯೆ ಆಗಿತ್ತು. ಈ ಬಾರಿ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಲಮಂಡಳಿಗೆ ವಾರ್ಷಿಕ 1 ಸಾವಿರ ಕೋಟಿ ನಷ್ಟ ಉಂಟಾಗುತ್ತಿದೆ. ಈ ನಟ್ಟವನ್ನು ಸರಿದೂಗಿಸಲು, ಸಂಸ್ಥೆ ಉಳಿಸಲು ಶೀಘ್ರವೇ ನೀರಿನ ದರ ಹೆಚ್ಚಳ ಮಾಡುವುದಾಗಿ ಘೋಷಿಸಿದರು.

RELATED ARTICLES
- Advertisment -
Google search engine

Most Popular