ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದ ಹೊರವಲಯದ ತೋಟದಲ್ಲಿ ಗ್ರಾಮಸ್ಥರ ಸಹಕಾರದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ಆರಾಧನೆ ನಡೆಯಿತು.
ಪುರೋಹಿತರಾದ ವೇಮನಾರಾಧ್ಯ ನೇತೃತ್ವದಲ್ಲಿ ತೋಟದಲ್ಲಿ ಹಸಿರು ಮಂಟಪ ನಿರ್ಮಿಸಿ ಶ್ರೀ ಮಹದೇಶ್ವರ ಸ್ವಾಮಿ ಕಳಸ ಪ್ರತಿಷ್ಠಾಪಿಸಿ ವಿವಿಧ ಬಗೆ ಪುಷ್ಪಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ನೆರವೇರಿಸಿ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಸಲಾಯಿತು.

ಈ ಬಾರಿ ಗ್ರಾಮದ ಪುಷ್ಪಲತಾ ಚಂದ್ರಶೇಖರ್ ಆರಾಧ್ಯ ಕುಟುಂಬದವರು ದಾಸೋಹ ನಡೆಸಿಕೊಟ್ಟರು, ಈ ಸಂದರ್ಭ ಗ್ರಾಮದ ಯಜಮಾನರು ಜನಪ್ರತಿನಿಧಿಗಳು ಮುಖಂಡರು ಗ್ರಾಮಸ್ಥರು ಹಾಜರಿದ್ದು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.