ಮಂಡ್ಯ: ಬೆಂಗಳೂರಿನಲ್ಲಿ ಬಂಧಿತ ಭಯೋತ್ಪಾದಕರನ್ನು ಅಂಡಮಾನ್ ಜೈಲಿಗೆ ಹಾಕುವಂತೆ ಒತ್ತಾಯಿಸಿ ಬಜರಂಗ ಸೇನೆ ಜಿಲ್ಲಾಧಿಕಾರಿ ಡಾ.ಕುಮಾರ್ ಗೆ ಮನವಿ ಸಲ್ಲಿಸಿದ್ದಾರೆ.
ಬಜರಂಗಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಬಂಧಿತರನ್ನು ಪರಪ್ಪನ ಅಗ್ರಹಾರದಲ್ಲಿ ಬಂಧನದಲ್ಲಿ ಇರಿಸಿದರೆ, ಅವರು ಮತ್ತೊಮ್ಮೆ ಉಗ್ರ ಕೃತ್ಯ ಎಸಗಳು ಸಂಚು ರೂಪಿಸುತ್ತಾರೆ. ಇದಕ್ಕೆ ಸರ್ಕಾರವೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಷ್ಟೇ ಅಲ್ಲದೆ ಜೈಲಿನಲ್ಲಿ ಇರುವವರನ್ನು ಉಗ್ರ ಕೃತ್ಯಕ್ಕೆ ಬಳಸಿಕೊಳ್ಳುತ್ತಾರೆ. ಹಾಗಾಗಿ ಅಂಡಮಾನ್ ಜೈಲಿಗೆ ಹಾಕಬೇಕು ಎಂದು ಮನವಿ ಮಾಡಿದರು.