Saturday, April 19, 2025
Google search engine

Homeರಾಜಕೀಯಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನು ನಂಬಲು ಸಾಧ್ಯವಿಲ್ಲ: ಮಾಜಿ ಸಚಿವ ನಾರಾಯಣ ಗೌಡ

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನು ನಂಬಲು ಸಾಧ್ಯವಿಲ್ಲ: ಮಾಜಿ ಸಚಿವ ನಾರಾಯಣ ಗೌಡ

ಮಂಡ್ಯ: ಈ ಹಿಂದೆ ಮಾಜಿ ಸಿ.ಎಂ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಪರ ಮಾತಾಡ್ತಿದ್ರು, ಈಗ ಬಿಜೆಪಿ ಪರ ಮಾತಾಡ್ತಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡ್ತಾರೆ, ಅವರನ್ನ ನಂಬಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಂದಾಣಿಕೆ ಬಗೆಗೆ ನಮ್ಮ ಪಕ್ಷದ ವರಿಷ್ಠರು ಏನೂ ಹೇಳಿಲ್ಲ. ಈ ಬಗ್ಗೆ ನಮ್ಮ‌‌ಪಕ್ಷ ಏನ್ ತೀರ್ಮಾನ ಮಾಡುತ್ತೆ ಅನ್ನೋದರ ಬಗ್ಗೆ ಕಾದು ನೋಡೋಣ. ಜೆಡಿಎಸ್ ಜೊತೆಗೆ ಬಿಜೆಪಿ ಹೊಂದಾಣಿಕೆಯಾಗಿದ್ದೇ ಆದ್ರೆ ನಾನು ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತೆ. ಎರಡೂ ಪಕ್ಷಗಳು ಮೈತ್ರಿಯಾಗಿದ್ದೇ ಆದ್ರೆ ನನ್ನ ನಿರ್ಧಾರ ಏನು ಎಂಬುದನ್ನ ಟೈಂ ಬಂದಾಗ ಹೇಳ್ತಿನಿ. ಈಗ ಅದ್ರ ಬಗೆಗೆ ಮಾತನಾಡಲ್ಲ ಎಂದು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಮಾಜಿ ಸಚಿವ ನಾರಾಯಣ ಗೌಡ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡೋ ಬಗೆಗೂ ಇನ್ನ ನಿರ್ಧರಿಸಿಲ್ಲ ಎಂದಿದ್ದಾರೆ.

ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಬಗ್ಗೆ ಚರ್ಚೆಯಾಗಿತ್ತು. ಈ ಹಿಂದೆ ಜೆಡಿಎಸ್ ನಲ್ಲೇ ಇದ್ದ ನಾರಾಯಣಗೌಡ.  ಇದೀಗ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಬಗ್ಗೆ ಚರ್ಚೆ ಹಿನ್ನಲೆ ನಾರಾಯಣಗೌಡ ಕಾಂಗ್ರೆಸ್ ಸೇರುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

61ನೇ ಜನ್ಮದಿನ ಆಚರಣೆ

ಕೆ.ಆರ್.ಪೇಟೆಯಲ್ಲಿ ಮಾಜಿ ಸಚಿವ ನಾರಾಯಣಗೌಡರು ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಅದ್ದೂರಿ ಹುಟ್ಟು ಹಬ್ಬ ಆಚರಣೆ ಆಚರಿಸಿಕೊಂಡಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ತಮ್ಮ ನಿವಾಸದಲ್ಲಿ ತಮ್ಮ 61 ನೇ ಹುಟ್ಟು ಹಬ್ಬವನ್ನು  61 ಕೆಜಿ ಯ ಬೃಹತ್ ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಆಚರಿಸಿದ್ದಾರೆ.

ನೆಚ್ಚಿನ ನಾಯಕನಿಗೆ ಶಾಲು, ಹಾರ ಹಾಕಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಹುಟ್ಟು ಹಬ್ಬದ ಶುಭಕೋರಿದ್ದಾರೆ.

RELATED ARTICLES
- Advertisment -
Google search engine

Most Popular