Saturday, April 19, 2025
Google search engine

Homeರಾಜ್ಯಸುದ್ದಿಜಾಲರೈತರ ಪ್ರಗತಿಯಿಂದ ರಾಮರಾಜ್ಯ ಸ್ಥಾಪನೆ ಸಾಧ್ಯ: ಹೆಚ್‌ಡಿಕೆ

ರೈತರ ಪ್ರಗತಿಯಿಂದ ರಾಮರಾಜ್ಯ ಸ್ಥಾಪನೆ ಸಾಧ್ಯ: ಹೆಚ್‌ಡಿಕೆ

ಸುತ್ತೂರು ಜಾತ್ರೆಯಲ್ಲಿ ಯಶಸ್ವಿಯಾಗಿ ನಡೆದ ಕೃಷಿ ವಿಚಾರ ಸಂಕಿರಣ

ನಂಜನಗೂಡು: ರೈತರನ್ನು ಮೂರನೇ ದರ್ಜೆಯ ಜನರೆಂದು ಪರಿಗಣಿಸಲಾಗುತ್ತಿದೆ, ಇದು ನೋವಿನ ಸಂಗತಿ, ರೈತರ ಪ್ರಗತಿಯಾಗದಿದ್ದಲ್ಲಿ ಮಹಾತ್ಮಾ ಗಾಂಧೀಜಿಯವರ ಆಶಯದ ರಾಮರಾಜ್ಯ ಸ್ಥಾಪನೆ ಸಾಧ್ಯವಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಅವರು ಸುತ್ತೂರು ಜಾತ್ರಾ ಮಹೋತ್ಸವದ ಕೃಷಿ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ದೇಶ ತಾಂತ್ರಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸಿದ್ದು, ವಿಶ್ವದ ಇತರೆ ರಾಷ್ಟçಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದೆ ಆದರೆ ಸಮಾಜದಲ್ಲಿ ಜನರ ನಡುವೆ ಬಾಂಧವ್ಯದ ಕೊರತೆ ಕಾಡುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಆಡಳಿತ ವ್ಯವಸ್ಥೆಯಲ್ಲಿನ ಕಾರ್ಯಕ್ರಮಗಳ ವೈಫಲ್ಯದಿಂದ ಚಾಮರಾಜನಗರದ ಮೂಲಕ ಶುರುವಾದ ಮೈಕ್ರೋ ಪೈನಾನ್ಸ್ ಕಿರುಕುಳ ಪ್ರಕರಣಗಳು ರಾಜ್ಯದ ವಿವಿದೆಡೆ ದಿನನಿತ್ಯ ಕಂಡುಬರುತ್ತಿದ್ದು ಸಾಮಾನ್ಯ ಜನರು ನೋವಿನಲ್ಲಿದ್ದಾರೆ. ದೇಶದಲ್ಲಿ ಹಣದ ಕೊರತೆಯಿಲ್ಲ ಆದರೆ ಹಣದ ಬಳಕೆಯಲ್ಲಾಗುತ್ತಿರುವ ವೈಫಲ್ಯಗಳಿಂದ ಇಂತಹ ಸಮಸ್ಯೆ ಉದ್ಭವಿಸಿವೆ ಎಂದರು.

ಇನ್ನು ಮಂಡ್ಯದಿoದ ಲೋಕಸಭಾ ಸದಸ್ಯನಾಗಿ ಆಯ್ಕೆಯಾದ ಬಳಿಕ ಕ್ಷೇತ್ರ ವ್ಯಾಪ್ತಿಯ ಮಳವಳ್ಳಿಯಲ್ಲಿ ಈ ವರ್ಷ ಶಿವರಾತ್ರೀಶ್ವರ ಶಿವಯೋಗಿಗಳವರ ೧೦೬೬ನೇ ಜಯಂತಿ ಮಹೋತ್ಸವವನ್ನು ಆಚರಿಸಲು ಅವಕಾಶ ಕಲ್ಪಿಸುವಂತೆ ಸ್ವಾಮೀಜಿಯವರಿಗೆ ಮನವಿ ಮಾಡಿಕೊಂಡಿದ್ದೇನೆ ಸ್ವಾಮೀಜಿಯವರು ಸಹಾ ಒಪ್ಪಿಗೆ ಸೂಚಿಸಿದ್ದಾರೆ. ಆದ್ದರಿಂದ ಈ ವರ್ಷ ಮಳವಳ್ಳಿಯಲ್ಲಿಯೇ ಸ್ವಾಮೀಜಿ ಜಯಂತಿ ಆಚರಿಸುವುದಾಗಿ ಘೋಷಿಸಿದರು.

ವಿಧಾನಸಭಾದ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಭಾರತ ಕೃಷಿ ಪ್ರದಾನ ರಾಷ್ಟçವಾಗಿದ್ದು, ಕೃಷಿಯೇ ನಮ್ಮೆಲ್ಲರ ಜೀವನಾಧಾರವಾಗಿದೆ. ಇತ್ತೀಚೆಗೆ ಜನರು ಕೃಷಿಯಿಂದ ವಿಮುಖರಾದಂತೆ ರೋಗ-ರುಜಿನಗಳ ಪ್ರಮಾಣವೂ ಹೆಚ್ಚಾಗಿದ್ದು, ಸ್ವಾತಂತ್ರ÷್ಯ ಬಂದ ಸಂದರ್ಭ ದೇಶದ ಜನಸಂಖ್ಯೆ ೩೩ ಕೋಟಿಗೆ ಆಹಾರ ಸ್ವಾವಲಂಭನೆ ಸಾದಿಸಲು ಸಧ್ಯವಾಗಿರಲಿಲ್ಲ ಆದರೆ ಈಗ ಕೃಷಿಯಲ್ಲಾಗಿರುವ ಆವಿಷ್ಕಾರದಿಂದಾಗಿ ದೇಶ ಆಹಾರೋತ್ಪನ್ನಗಳ ಬೆಳೆಯಲ್ಲಿ ಸ್ವಾವಲಂಭನೆ ಸಾಧಿಸಿದೆ. ಇನ್ನು ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೃಷಿಗೆ ಪ್ರೋತ್ಸಾಹಕರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಗ್ರಾಮೀಣ ಜನರ ಜೀವನ ಹಾಗೂ ಬದುಕಿನ ಸುಧಾರಣೆಗೆ ಮುಂದಾಗಿರುವುದು ಪ್ರಶಂಸಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರುಗಳಾದ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಶಾಸಕರುಗಳಾದ ಜಿ.ಡಿ.ಹರೀಶ್‌ಗೌಡ, ಧೀರಜ್ ಮುನಿರಾಜು, ಸಿ.ಎನ್.ಮಂಜೇಗೌಡ, ಮಾಜಿ ಶಾಸಕರುಗಳಾದ ಡಾ.ಕೆ.ಅನ್ನದಾನಿ, ಅಶ್ವಿನ್‌ಕುಮಾರ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಸಾಮರಸ್ಯ, ವಕೀಲ ನಂಜುoಡಸ್ವಾಮಿ (ಬೊಮ್ಮಾಯಿ) ಮೊದಲಾದವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular