ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರೈತರಿಗೆ ಸರ್ಕಾರ ದಿಂದ ಸಿಗುವ ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸ ಬೇಕಾದ ಜವಬ್ದಾರಿ ಜನಪ್ರತಿನಿಧಿಗಳ ಮೇಲಿದೆ ಎಂದು ಕೆ.ಆರ್.ನಗರ ಸರ್ಕಾರಿ ನೌಕರರ ಸಂಘದ ಮಾಜಿ ಉಪಾಧ್ಯಕ್ಷ ಹೊಸೂರು ಎ.ಕುಚೇಲ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಬೆಂಬಲಿತ ಬೆಣಗನಹಳ್ಳಿ ಬಿ.ಜಿ. ಪ್ರಶನ್ನ ಮತ್ತು ಹೊಸಕೋಟೆ ಎಚ್.ಬಿ. ಸಚಿನ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿಕ ರೈತರಿಗಾಗಿ ಇರುವ ಈ ಸಂಘಗಳಲ್ಲಿ ಚುನಾವಣೆಯ ರಾಜಕೀಯ ಬೆರಸದೆ ಎಲ್ಲಾ ರೈತರಿಗೂ ಸಕಾಲದಲ್ಲಿ ಸಾಲ ವಿತರಣೆ ಮಾಡುವ ಮೂಲಕ ರೈತರ ಹಿತವನ್ನು ಕಾಯಿದು ತಮ್ಮನ್ನು ಆಯ್ಕೆ ಮಾಡಿದ ರೈತರಿಗೆ ಸದಾ ಕೃತಜ್ಞರಾಗಿ ಇರಬೇಕೆಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ನಿರ್ದೇಶಕರಾದ ಪ್ರಶನ್ನ ಮತ್ತು ಸಚಿನ್ ಮಾತನಾಡಿ ತಮ್ಮ ಗೆಲುವಿಗೆ ಸಹಕಾರ ನೀಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ಸಂಘದ ವ್ಯಾಪ್ತಿಯ ಷೇರುದಾರ ರೈತರು ಅಲ್ಲದೇ ಜೆಡಿಎಸ್ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹಳಿಯೂರು ಬಡಾವಣೆಯ ಡೈರಿ ಅಧ್ಯಕ್ಷ ಎಚ್.ಆರ್.ಕೃಷ್ಣಮೂರ್ತಿ, ಹೊಸೂರು ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಆರ್.ಮಧುಚಂದ್ರ, ಹಳಿಯೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎಚ್.ಡಿ.ಕೆ.ಭಾಸ್ಕರ್, ಮುಖಂಡ ಪೇಪರ್ ಪ್ರಮೋದ್, ಬುದ್ದಿಸಾಗರ ಸೇರಿದಂತೆ ಮತ್ತಿತರರು ಹಾಜರಿದ್ದರು.