ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಈ ಬಾರಿ 19 ಸೀಟ್ ಬಂದಿದೆ, ಮುಂದಿನ ಸಾರಿ 10 ಸೀಟ್ ಬಾರದ ಸ್ಥಿತಿಗೆ ತಲುಪಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬೆಮೆಲ್ ಕಾಂತರಾಜು ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.
ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನಲ್ಲಿ ಮಾತನಾಡಿದ ಬೆಮೆಲ್ ಕಾಂತರಾಜು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಸದನದಲ್ಲಿ ಮಾತನಾಡುತ್ತಿರುವ ರೀತಿ. ಕುಮಾರಸ್ವಾಮಿ ಅವರು ಹೊರಗಡೆ ನಡೆದುಕೊಂಡ ರೀತಿ ಜನರಿಗೆ ಗೊತ್ತಾಗ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಪ್ರಧಾನಿ ದೇವೇಗೌಡರ ಜೊತೆ ನಾವೆಲ್ಲ ಕೆಲಸ ಮಾಡಿದ್ದೇವೆ. ದೇವೇಗೌಡ ಅವರು ಜ್ಯಾತ್ಯಾತೀತ ಮನೋಭಾವ ಇಟ್ಟುಕೊಂಡಿರುವ ನಾಯಕರು. ಕುಮಾರಸ್ವಾಮಿ ಅವರು ಕರ್ನಾಟಕ ರಾಜ್ಯದ ಜನರಿಗಾಗಿ ಅಲ್ಲ. ತಮ್ಮ ರಾಜಕೀಯ ಉಳಿವಿಗೋಸ್ಕರ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗ್ತಿದೆ. ಕುಮಾರಸ್ವಾಮಿ ಅವರ ಮನೋಭಾವ ಎಂತದ್ದು ಎಂಬುದು ಗೊತ್ತಾಗುತ್ತಲಿದೆ ಎಂದು ಹರಿಹಾಯ್ದರು.