ಹುಣಸೂರು:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರ 81ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹುಣಸೂರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ನೇಹಜೀವಿ ಅಭಿಮಾನಿ ಬಳಗದವರು ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಶುಕ್ರವಾರದಂದು ಹಣ್ಣು ಹಂಪಲು ವಿತರಿಸಿ ಶೀಘ್ರ ಗುಣಮುಖರಾಗಿ ಎಂದು ಶುಭ ಕೋರಿದರು.
ನಂತರ ಹುಣಸೂರು ಅಂಬೇಡ್ಕರ್ ನಗರದ ಹಂದಿ ಜೋಗಿ ಕಾಲೋನಿಯಲ್ಲಿ ಮಧ್ಯಾಹ್ನದ ಅನ್ನದಾಸೋಹ ಕಾರ್ಯಕ್ರಮ ನಡೆಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಬಿಳಿಕೆರೆ ಬಸವರಾಜ್
ದಲಿತ ಸಮಾಜದ ಪರಮೋಚ್ಚ ನಾಯಕ ಮಲ್ಲಿಕಾರ್ಜುನ ಖರ್ಗೆ ಜಿ ರವರು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನಲ್ಲಿ ಮಾಪಣ್ಣ ಖರ್ಗೆ ಮತ್ತು ತಾಯಿ ಸಬವ್ವಾರ ಮಗನಾಗಿ ಜುಲೈ 21, 1942ರಲ್ಲಿ ಜನಿಸಿ ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ವಿದ್ಯಾರ್ಥಿ ನಾಯಕರಾಗಿ ಹೊರಹೊಮ್ಮಿದರು. 1969 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡು ಅಂದಿನಿಂದ ಇಲ್ಲಿಯವರೆಗೂ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನಾಯಕರಾಗಿದ್ದಾರೆ ಎಂದು ತಿಳಿಸಿ ಅವರು ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಅಗ್ರ ನಾಯಕರಾಗಿ ಹೊರಹೊಮ್ಮಲಿ ಎಂದು ಶುಭ ಕೋರಿದರು.
ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಗರನಹಳ್ಳಿ ಕುಮಾರ್ ತಾಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಲ್ಕುಣಿಕೆ ರಾಘು ಯುವ ಮುಖಂಡರಾದ ಬಿಳಿಕೆರೆ ಮಧು, ಮಂಜು ಮೊದಲಿಯರ್, ಆಟೋ ಶಿಲ್ಪಿ, ಗುರುಪುರ ಪ್ರಶಾಂತ್ ಧರ್ಮಪುರ ಮಹಾದೇವ್ ಅಶೋಕ್ ಜಯಸ್ವಾಮಿ ಗಣೇಶ್ ನವೀನ್ ಸೇರಿದಂತೆ ಅನೇಕ ಯುವ ಮುಖಂಡರುಗಳು ಹಾಜರಿದ್ದರು.