Saturday, April 19, 2025
Google search engine

Homeರಾಜ್ಯಕೇಂದ್ರ ಬಜೆಟ್: ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ 1 ಲಕ್ಷ ಕೋಟಿ ರೂ....

ಕೇಂದ್ರ ಬಜೆಟ್: ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ 1 ಲಕ್ಷ ಕೋಟಿ ರೂ. ಮೀಸಲು

ನವದೆಹಲಿ: ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ 1 ಲಕ್ಷ ಕೋಟಿ ರೂ. ಮೀಸಲಿಡಲಾಗುವುದು. ಇದು ಕುಡಿಯುವ ನೀರು, ನೈರ್ಮಲ್ಯಕ್ಕೆ ಒತ್ತು ನೀಡಲು ವಿನಿಯೋಗಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಯುವಜನತೆ, ದಲಿತರು, ಅನ್ನದಾತರು ಮತ್ತು ಮಹಿಳೆಯರನ್ನು ಉದ್ದೇಶವಾಗಿಟ್ಟುಕೊಂಡು ಬಜೆಟ್ ಮಂಡಿಸಲಾಗುತ್ತಿದೆ ಎಂದ ವಿತ್ತ ಸಚಿವೆ ಮುಂದಿನ ಐದು ವರ್ಷಗಳ ಅಭಿವೃದ್ಧಿಯನ್ನು ಗಮದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್‌ನಲ್ಲಿ ಕೃಷಿ, ಕೈಗಾರಿಕೆ, ಗಣಿಗಾರಿಕೆ, ಆರ್ಥಿಕತೆ, ಇಂಧನಗಳಿಗೆ ಒತ್ತು ನೀಡಲಾಗಿದೆ ಎಂದಿದ್ದಾರೆ.

60 ಸಾವಿರ ಕೋಟಿ ರೂ. ರಫ್ತು ವಹಿವಾಟು ಹೊಂದಿರುವ ಮೀನುಗಾರಿಕೆಯಲ್ಲಿ ಅಂಡಮಾನ್ ನಿಕೋಬಾರ್ ಹಾಗೂ ಲಕ್ಷ್ಯದ್ವೀಪಗಳನ್ನು ಗುರಿಯಾಗಿಸಿಕೊಂಡು ಒತ್ತು ನೀಡಲಾಗುವುದು. ಇದಕ್ಕಾಗಿ ವಿಶೇಷ ವಲಯ ನಿರ್ಮಿಸಲಾಗುವುದು. ಪೌಷ್ಟಿಕತೆಯಲ್ಲಿ ಹೆಚ್ಚು ಬೇಡಿಕೆ ಇರುವ ತಾವರೆ ಬೀಜ (ಮಕಾನಾ) ಬೆಳೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ಆತ್ಮನಿರ್ಭರ ಭಾರತ ಮೂಲಕ ಸ್ಟಾರ್ಟ್ ಅಪ್‌ಗಳಿಗೆ 10ಕೋಟಿ ರೂಪಾಯಿ ಇಂದ 20 ಕೋಟಿ ರೂ. ವರೆಗೂ ಕಡಿಮೆ ಬಡ್ಡಿ ಸಾಲ. ಮೈಕ್ರೋ ಕಂಪನಿಗಳಿಗೆ 5 ಲಕ್ಷ ರೂ.ವರೆಗಿನ ಕ್ರೆಡಿಟ್ ಕಾರ್ಡ್ ವಿತರಣೆ ಹಾಗೂ ಇಂಥ 10 ಲಕ್ಷ ಕಾರ್ಡ್ ಮೊದಲ ಹಂತದಲ್ಲಿ ಹಂಚಿಕೆ ಮಾಡಲಾಗುತ್ತದೆ.

ಉದ್ಯಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಉತ್ತೇಜಿಸುವ ಸಲುವಾಗಿ ಹೊಸ ಯೋಜನೆ ಜಾರಿಗೊಳಿಸಲಾಗುವುದು. 22 ಲಕ್ಷ ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ಚರ್ಮೋದ್ಯವನ್ನು ಉತ್ತೇಜಿಸಿ ರಫ್ತು ಹೆಚ್ಚಿಸುವತ್ತ ಗಮನ ಹರಿಸಲಾಗುವುದು. ಆ ಮೂಲಕ ಮೇಡ್ ಇನ್ ಇಂಡಿಯಾ ಬ್ರಾಂಡ್ ಉತ್ತೇಜಿಸಲಾಗುವುದು ಎಂದು ಘೋಷಿಸಿದರು.

ಇನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ತಯಾರಿಕಾ ವಲಯ ರಚನೆ ಮಾಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಇದನ್ನು ಜಾರಿಗೊಳಿಸಲಾಗುವುದು. ಸೌರ, ಇವಿ ಬ್ಯಾಟರಿ, ಮೋಟಾರ್‌ಗಳು ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆ ಹಾಗೂ ಹೂಡಿಕೆಯನ್ನು ಉತ್ತೇಜಿಸಲಾಗುವುದು ಎಂದರು.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮೂರು ನಾವಿನ್ಯತೆ ಸಂಸ್ಥೆಗಳ ಸ್ಥಾಪನೆ 23 ಐಐಟಿಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಿಸಲಾಗಿದೆ. 60 ಸಾವಿರದಿಂದ 1.2 ಲಕ್ಷಕ್ಕೆ ಹೆಚ್ಚಳ. ಪಟ್ನಾ ಐಐಟಿ ವಿಸ್ತರಣೆ. ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು ಶೇ 100ರಷ್ಟು ಹೆಚ್ಚಳ ಮಾಡಲಾಗುವುದು ಎಂದು ಘೋಷಣೆ ಮಾಡಿದರು.

RELATED ARTICLES
- Advertisment -
Google search engine

Most Popular