Tuesday, April 8, 2025
Google search engine

Homeಸ್ಥಳೀಯಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದ ಮುಖ್ಯಮಂತ್ರಿ ಸಿದ್ದರಾಮಯ್ಯ

​ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ನಗರದ ವಿವಿಧೆಡೆ ಸಂಚಾರ ಕೈಗೊಂಡಿದ್ದು, ಅಗ್ರಹಾರದ ಮೈಲಾರಿ ಹೋಟೆಲ್ ನಲ್ಲಿ ತಮ್ಮಿಷ್ಟದ ಬೆಣ್ಣೆ ಮಸಾಲೆ ದೋಸೆಯನ್ನೂ ಸವಿದರು.

ಮುಂಜಾನೆ ಬೆಂಗಾವಲು ಪಡೆಯನ್ನು ಬಿಟ್ಟು ಖಾಸಗಿ ವಾಹನದಲ್ಲಿ ಹೊರಗೆ ತೆರಳಿ ಅಚ್ಚರಿ ಮೂಡಿಸಿದ ಅವರು ಕೆಲ ಸಮಯದ ಬಳಿಕ ಟಿ.ಕೆ. ಬಡಾವಣೆಯಲ್ಲಿನ ತಮ್ಮ ನಿವಾಸಕ್ಕೆ ವಾಪಸ್ ಆದರು. ಬಳಿಕ ಮನೆಯ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತಮ್ಮ ಸ್ನೇಹಿತ ಶ್ರೀನಿವಾಸನ್ ನಿವಾಸಕ್ಕೆ‌ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.

ಅಗ್ರಹಾರದ ಮೈಲಾರಿ ದೋಸೆ ಹೋಟೆಲ್ ಗೆ ಬಂದ ಸಿದ್ದರಾಮಯ್ಯರನ್ನು ಅಭಿಮಾನಿಗಳು ಮುತ್ತಿಕೊಂಡರು. ಅಲ್ಲಿ ಅವರು ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ‌, ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ, ಸಂದೇಶ್ ನಾಗರಾಜು ಜೊತೆಗೂಡಿ ದೋಸೆ ಸವಿದರು.

RELATED ARTICLES
- Advertisment -
Google search engine

Most Popular