Sunday, April 20, 2025
Google search engine

Homeಅಪರಾಧದುಷ್ಕರ್ಮಿಗಳಿಂದ ಕುರಿಗಳ ಹತ್ಯೆ

ದುಷ್ಕರ್ಮಿಗಳಿಂದ ಕುರಿಗಳ ಹತ್ಯೆ

ಚಿಕ್ಕಮಗಳೂರು:ಕಿಡಿಗೇಡಿಗಳು ಕೊಟ್ಟಿಗೆಯಲ್ಲಿದ್ದ 9 ಕುರಿಗಳ ಕತ್ತು ಸೀಳಿ ದಾರುಣವಾಗಿ ಕೊಂದ ಘಟನೆ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ನಡೆದಿದೆ. ಕೊಟ್ಟಿಗೆಯಲ್ಲಿದ್ದ 39 ಕುರಿಗಳಲ್ಲಿ 9 ಕುರಿಗಳ ಕತ್ತು ಕುಯ್ದು, 27 ಕುರಿಗಳನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. ಇನ್ನು ಕೊಟ್ಟಿಗೆ ತುಂಬಾ ಕುರಿಗಳ ಮೃತ ದೇಹ ತುಂಬಿಕೊಂಡಿದ್ದು, ದಿನಕರ್ ಎಂಬುವರಿಗೆ ಸೇರಿದ್ದ ಕುರಿಗಳು ಎಂದು ತಿಳಿದುಬಂದಿದೆ. ಇನ್ನು ಈ ಕುರಿತಂತೆ ಚಿಕ್ಕ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ಸುಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular