ಮೈಸೂರು: ಮೈಸೂರಿನ ಬೆಳವಾಡಿಯಲ್ಲಿರುವ ಸೈನಿಕ ಅಕಾಡೆಮಿನಲ್ಲಿ ಸುಮಾರು ಮೂರು ತಿಂಗಳಿಂದ ತರಬೇತಿ ಪಡೆದು ಪರೀಕ್ಷೆ ಬರೆಯಲು ತೆರಳುತ್ತಿರುವ ಅಭ್ಯರ್ಥಿಗಳಿಗೆ ಶುಭವಾಗಲೆಂದು ಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆಯಲಾಯಿತು.
ಸಂಜೆ ಸೈನಿಕ ಅಕಾಡೆಮಿಯಲ್ಲಿ ಮೈಸೂರು ಪತ್ರಿಕಾ ಸಂಘದ ಮಾಜಿ ಅಧ್ಯಕ್ಷರಾದ ಮಹೇಂದ್ರ.ಸಿ ಕೆ ಯವರ ಉಪಸ್ಥಿತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಶುಭಕೋರುವ ಕಾರ್ಯಕ್ರಮವನ್ನು ನಡೆಸಲಾಯಿತು.
ಮಹೇಂದ್ರ.ಸಿ ಕೆ ಅವರು ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳಿಗೆ ಆತ್ಮವಿಶ್ವಾಸ ಮತ್ತು ಭರವಸೆ ಹೆಚ್ಚಿಸುವಂತೆ ತಿಳಿಹೇಳಿದರು ಮತ್ತು ಧಕ್ಷಿಣ ಭಾರತದಲ್ಲಿ ಈ ತರಹ ರಕ್ಷಣಾ ಇಲಾಖೆಗೆ ಸಂಭಂಧಿಸಿದಂತೆ ವಸತಿ ತರಬೇತಿ ಕೇಂದ್ರ ಇರುವುದು ನಮಗೆ ಹೆಮ್ಮೆ ತರುವ ಸಂಗತಿ, ಈ ಸಂಸ್ಥೆಯಿಂದ 361 ಅಭ್ಯರ್ಥಿಗಳು ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಒಂದು ದೊಡ್ಡ ಸಾಧನೆ, ಇಂತಹ ಸಂಸ್ಥೆಯಲ್ಲಿ ನೀವು ತರಬೇತಿ ಪಡೆದಿರುವುದು ನಿಜವಾಗಿಯೂ ಶ್ಲಾಘನೀಯ, ನೀವೆಲ್ಲರೂ ಪರೀಕ್ಷೆ ಬರೆದು ಆಯ್ಕೆ ಆದಮೇಲೆ ನಿಮಗೆಲ್ಲರಿಗೂ ನಾನೇ ಬಂದು ಸನ್ಮಾನಿಸುತ್ತೇನೆ ಎಂದು ವಿಶ್ವಾಸ ನೀಡಿದರು ಜೊತೆಗೆ ಸೈನಿಕ್ ಅಕಾಡೆಮಿಯ ಎಲ್ಲಾ ಅಧ್ಯಾಪಕರು ಸ್ಪರ್ಧಾರ್ಥಿಗಳಿಗೆ ಪರೀಕ್ಷೆಯ ಬಗ್ಗೆ ವಿಶ್ವಾಸ ತುಂಬಿದರು ಸೈನಿಕ್ ಅಕಾಡೆಮಿಯ ಸಂಸ್ಥಾಪಕರಾದ ಮಾಜಿ ಕಮಾಂಡೋ ಶ್ರೀಧರ್.ಸಿಎಂ ರವರು ಕಳೆದ ಮೂರು ತಿಂಗಳಿನಿಂದ ನಮ್ಮಲ್ಲಿ ತರಬೇತಿ ಪಡೆದು ನಿಮ್ಮ ಪ್ರಯತ್ನ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಪರೀಕ್ಷೆ ಬರೆಯಲು ತಯಾರಾಗಿರುವ ನೀವು ಯುದ್ಧಕ್ಕೆ ಸಜ್ಜಾದ ಸೈನಿಕರಂತೆ, ಎಲ್ಲಾ ಮಕ್ಕಳು ಸೇನೆಗೆ ಆಯ್ಕೆಯಾಗಿ ಎಂದು ಶುಭ ಕೋರಿದರು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹೇಂದ್ರ.ಸಿ ಕೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಅಧ್ಯಾಪಕರು ರವಿ, ವಿಜಯ್, ನಮ್ರತಾ, ಮಲ್ಲಿಕಾರ್ಜುನ, ಶ್ರೀಲಕ್ಷ್ಮಿ ಹಾಗೂ ಸಿಬ್ಬಂದಿಗಳು ಸಹ ಸಿಬ್ಬಂದಿಗಳು ದಿಲೀಪ್, ಚೇತನ್, ಉಪಸ್ಥಿತಿ ಇದ್ದರು.