ವಿನಯ್ ದೊಡ್ಡಕೊಪ್ಪಲು
ಹೊಸೂರು : ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಇದ್ದು ಇದರ ನಡುವೆ ಮೈಸೂರು-ಕೊಡಗು ಕ್ಷೇತ್ರದಿಂದ ಜೆಡಿಎಸ್ ವರಿಷ್ಠರು ಅಭ್ಯರ್ಥಿಯ ಹುಡುಕಾಟ ನಡೆಸಿದ್ದು ಕೆ.ಆರ್.ನಗರ ಕ್ಷೇತ್ರದ ಮಾಜಿ ಶಾಸಕ ಸಾ.ರಾ.ಮಹೇಶ್ ಹೆಸರು ಕೇಳಿಬಂದಿದ್ದು ಇವರು ಸ್ಪರ್ಧೆಗೆ ಇಳಿಯುತ್ತಾರೆಯೇ..? ಎಂಬ ಕೂತುಹಲ ಮೂಡಿಸಿದೆ.
ಈ ಬಾರಿಯ ವಿಧಾನ ಸಭೆಯ ಚುನಾವಣೆಯಲ್ಲಿ ಸೋತಿರುವ ಸಾ.ರಾ.ಮಹೇಶ್ ಅವರನ್ನು ಈ ಲೋಕಸಭಾ
ಕ್ಷೇತ್ರದಿಂದ ಕಣಕ್ಕಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಒಕ್ಕಲಿಗ ಸಮುದಾಯದ ಮತಗಳಿದ್ದು ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮತ್ತು ಹುಣಸೂರಿನ ಶಾಸಕ ಜಿ.ಡಿ.ಹರೀಶ್ ಗೌಡ,ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಇದ್ದು, ಎರಡು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ತಮ್ಮದೇ ಮತಗಳಿದ್ದು ಇದನ್ನು ಮನಗೊಂಡು ಈ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿ ಮಾಡಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಳೆಯ ನರ್ತನಕ್ಕೆ ತತ್ತರಿಸಿದ್ದ ಕೊಡಗಿನ ಜನರ ನೋವಿಗೆ ಸಾ.ರಾ.ಮಹೇಶ್ ಹಗಲು ರಾತ್ರಿ ಎನ್ನದೇ ತಮ್ಮಮನೆಯ ಹಬ್ಬಕ್ಕು ಹೋಗದೆ ಸ್ಪಂದಿಸಿರುವುದು ಅಲ್ಲಿನ ಜನರ ಮನದಲ್ಲಿ ಹಸಿರಾಗಿರುವ ಪರಿಣಾಮ ಜೆಡಿಎಸ್ ಗೆ ಪ್ಲಸ್ ಅಗುವ ಲೆಕ್ಕಾಚಾರ ಜೆಡಿಎಸ್ ವರಿಷ್ಠರಲ್ಲಿದೆ.
ಸದ್ಯ ಈ ಕ್ಷೇತ್ರವನ್ನು ಹಾಲಿ ಬಿಜೆಪಿ ಸಂಸದ ಪ್ರತಾಪ ಸಿಂಹ ಪ್ರತಿನಿಧಿಸುತ್ತಿದ್ದು ಮಾಜಿ ಮುಖ್ಯಮಂತ್ರಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಗೊoಡರೇ ಈ ಕ್ಷೇತ್ರವನ್ನು ಕೇಳಬಹುದು ಎಂಬ ಮಾತು ಕೇಳಿ ಬರುತ್ತಿದ್ದು ಒಂದು ವೇಳೆ ಮೈತ್ರಿ ಆಗದಿದ್ದರು ಸಾ.ರಾ.ಮಹೇಶ್ ಅವರನ್ನು ಜೆಡಿಎಸ್ ಅಭ್ಯರ್ಥಿ ಮಾಡಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ
ಈ ಕ್ಷೇತ್ರದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಿದರೇ ಇಲ್ಲವೇ ಬಿಜೆಪಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದರೇ ಅಗುವ ಅನುಕೂಲಗಳ ಬಗ್ಗೆ ಜೆಡಿಎಸ್ ನಲ್ಲಿ ಸಾಕಷ್ಟು ಚರ್ಚೆ ನಡೆದಿರುವ ಬೆನ್ನಲ್ಲೆ ಸಾ.ರಾ.ಮಹೇಶ್ ಅವರನ್ನು ಚುನಾವಣೆಗೆ ಸಿದ್ದರಾಗುವಂತೆ ಸೂಚನೆ ನೀಡಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ
ಸಾ.ರಾ.ನಡೆ ನಿಗೂಢ..?
ಈ ಕ್ಷೇತ್ರದಿಂದ ಸಾ.ರಾ.ಮಹೇಶ್ ಅವರನ್ನು ಕಣಕ್ಕೆ ಇಳಿಸಲು ಜೆಡಿಎಸ್ ಚಿಂತನೆ ನಡೆದಿರುವ ಬೆನ್ನಲ್ಲೆ ಇಲ್ಲಿಂದ ಸ್ಪರ್ಧಿಸುವ ಬಗ್ಗೆ ಸಾ.ರಾ.ಮಹೇಶ್ ಎಲ್ಲಿಯು ಮಾತಾಡದೇ ಮೌನಕ್ಕೆ ಶರಣಾಗಿದ್ದು ಕೆ.ಆರ್.ನಗರ ತಾಲೂಕಿನಲ್ಲಿ ಸಾಕಷ್ಟ ಅಭಿವೃದ್ದಿ ಮತ್ತು ವೈಯುಕ್ತಿಕ ವಾಗಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದರು ತಮ್ಮ ಸೋಲಿನ ನೋವನ್ನು ಆರಗಿಸಿಕೊಳ್ಳಲು ಆಗದ ಸ್ಥಿತಿಯಲ್ಲಿರುವ ಇವರು ಲೋಕಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಯುತ್ತಾರೆಯೇ..? ಎಂಬುವುದು ಮಾತ್ರನಿಗೂಢವಾಗಿದೆ.
ಯತೀಂದ್ರ ಸ್ಪರ್ಧೆ ಸಾಧ್ಯತೆ ..?

ಇನ್ನು ಈ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮಾಜಿ ಶಾಸಕ ಯತೀಂದ್ರ ಸರ್ಧೆಗೆ ಸಾಕಷ್ಟು ಒತ್ತಡಗಳು ಕಾಂಗ್ರೇಸ್ ಕಾರ್ಯಕರ್ತರಿಂದ ಬರುತ್ತಿವೆ ವರಿಷ್ಠರು ಹೇಳಿದರೇ ಸ್ಪರ್ಧೆಗೆ ಇಳಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದು ರಾಜಕೀಯ ಚಾಣಾಕ್ಷರಾಗಿರುವ ಸಿದ್ದರಾಮಯ್ಯ ತಮ್ಮ ಪುತ್ರ ಇಲ್ಲಿ ಸ್ಪರ್ಧಿಸಿದರೇ ಗೆಲುವು- ಸೋಲಿನ ಲೆಕ್ಕಚಾರಗಳನ್ನು ಒಳ ಒಳಗೆ ಮಾಡಿದ್ದು ಜೆಡಿಎಸ್ ಬಿಜೆಪಿ ಒಂದಾಗಿ ಒಬ್ಬರೇ ಅಭ್ಯರ್ಥಿ ಅದರೆ ಮಗನ ಗೆಲುವಿಗೆ ತೊಂದರೆ ಅಗಬಹುದು ಎಂಬ ಆಲೋಚನೆ ಇರುವ ಕಾರಣ ಬಿಜೆಪಿ -ಜೆಡಿಎಸ್ ಮೈತ್ರಿ ಅಂತಿಮ ನಿರ್ಧಾರದ ನಂತರದ ದಿನದಲ್ಲಿ ಮಗನ ಸ್ಪರ್ಧೆಯ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಡಿ.ರವಿಶಂಕರ್ ಗೆ ಅನುಕೂಲ – ಜೆಡಿಎಸ್ ಕಾರ್ಯಕರ್ತರು ಆತಂತ್ರ
ಒಂದು ವೇಳೆ ಈ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧಿಸಲು ಸಾ.ರಾ.ಮಹೇಶ್ ಅವರು ಒಪ್ಪಿಗೆ ನೀಡಿದರೇ ಕೆ.ಆರ್.ನಗರ ತಾಲೂಕಿನ ಜೆಡಿಎಸ್ ಕಾರ್ಯಕರ್ತರಿಗೆ ತಮ್ಮ ನಾಯಕನ ಕೊರತೆ ಎದುರಾಗಲಿದ್ದು ಸೋತ ನಂತರ ಈಗಾಲೇ ಸಾ.ರಾ.ಮಹೇಶ್ ಕೆ.ಆರ್.ನಗರದತ್ತ ಅಷ್ಟಾಗಿ ಕಾಣಿಸದೇ ಇರುವ ಕಾರಣ ಜೆಡಿಎಸ್ ಕಾರ್ಯಕರ್ತರು ತಮ್ಮ ರಾಜಕೀಯ ಭವಿಷ್ಯದ ಯೋಚನೆಯಲ್ಲಿ ತೊಡಗಿರುವ ಬೆನ್ನಲ್ಲೆ ಇದು ಈ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರ ರಾಜಕೀಯವಾಗಿ ಸಾಕಷ್ಟು ಅನುಕೂಲವಾಗಲಿದ್ದು ಸಾ.ರಾ.ಮಹೇಶ್ ಕ್ಷೇತ್ರಕ್ಕೆ ಬರದೇ ಹೋದರೇ ಜೆಡಿಎಸ್ ಕಾರ್ಯಕರ್ತರು ಮಂಕಾಗಲಿದ್ದು ಇದರಿಂದ ಕ್ಷೇತ್ರದಲ್ಲಿ ಕೈ ಪಕ್ಷದ ಸಂಘಟನೆಗೆ ಮತ್ತು ಕ್ಷೇತ್ರದ ಸಂಪೂರ್ಣ ಹಿಡಿತದ ಅವಕಾಶ ರವಿಶಂಕರ್ ಅವರಿಗೆ ದೊರೆಯಲಿದೆ ಎಂಬ ಮಾತುಗಳು ಎರಡು ಪಕ್ಷದಲ್ಲಿಯು ಕೇಳಿ ಬರುತ್ತಿದೆ.