Friday, January 16, 2026
Google search engine

Homeರಾಜ್ಯಸುದ್ದಿಜಾಲಬೆಕ್ಕರೆ ಗ್ರಾಮದ ಶ್ರೀ ನವಗ್ರಹ ದೇವಾಲಯದಲ್ಲಿ 21ನೇ ವರ್ಷದ ವಾರ್ಷಿಕೋತ್ಸವ

ಬೆಕ್ಕರೆ ಗ್ರಾಮದ ಶ್ರೀ ನವಗ್ರಹ ದೇವಾಲಯದಲ್ಲಿ 21ನೇ ವರ್ಷದ ವಾರ್ಷಿಕೋತ್ಸವ

ಹಲವು ವಿಶೇಷ ಪೂಜೆ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ

ವರದಿ: ಬೆಕ್ಕರೆ ಸತೀಶ್ ಆರಾಧ್ಯ

ಪಿರಿಯಾಪಟ್ಟಣ: ಬೆಕ್ಕರೆ ಗ್ರಾಮದ ಶ್ರೀ ನವಗ್ರಹ ದೇವಾಲಯದಲ್ಲಿ 21ನೇ ವರ್ಷದ ವಾರ್ಷಿಕೋತ್ಸವ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಜರುಗಿತು.

ಗ್ರಾಮದ ರಾಜೇಶ್ವರಿ ಟೈಲರ್ ಮಲ್ಲಿಕಾರ್ಜುನಾರಾಧ್ಯ ದಂಪತಿಗಳು ಅವರ ತಂದೆ ಬಸವರಾದ್ಯ ಹಾಗೂ ಗೌರಮ್ಮ ಅವರ ಜ್ಞಾಪಕಾರ್ಥವಾಗಿ 2004 ನೇ ವರ್ಷದಲ್ಲಿ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ನವಗ್ರಹ ದೇವಾಲಯದಲ್ಲಿ ಅರ್ಚಕರಾದ ಪರಶಿವಮೂರ್ತಿ ನೇತೃತ್ವದಲ್ಲಿ ಮುಂಜಾನೆಯಿಂದಲೇ ದೇವಾಲಯದಲ್ಲಿ ಹಲವು ಬಗೆಯ ಪೂಜೆಗಳು ನಡೆದು ಮಹಾ ಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನ ಸಂತರ್ಪಣೆ ನಡೆಯಿತು, ವಾರ್ಷಿಕೋತ್ಸವ ಅಂಗವಾಗಿ ದೇವಾಲಯವನ್ನು ವಿಶೇಷವಾಗಿ ಹೂಗಳಿಂದ ಹಾಗೂ ತಳಿರು ತೋರಣದಿಂದ ಅಲಂಕರಿಸಲಾಗಿತ್ತು ಬೆಕ್ಕರೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ಗ್ರಾಮದ ಮುಖಂಡರಾದ ಚಂದ್ರಶೇಖರ್, ಸೋಮಶೇಖರ್ ಆರಾಧ್ಯ, ಶಿಕ್ಷಕ ಸತೀಶ್ ಆರಾಧ್ಯ, ಶೋಭಾ, ದ್ರಾಕ್ಷಾಯಿಣಿ ನಾಗೇಂದ್ರ ಆಚಾರ್ ಸೇರಿದಂತೆ ಗ್ರಾಮದ ಮುಖಂಡರು ಗ್ರಾಮಸ್ಥರು ಇದ್ದರು.

RELATED ARTICLES
- Advertisment -
Google search engine

Most Popular