Saturday, April 19, 2025
Google search engine

Homeಅಪರಾಧಕರ್ತವ್ಯ ಲೋಪ: ಹೊಲಿಗೆ ಬದಲು ಫೆವಿಕ್ವಿಕ್‌ ಹಾಕಿದ್ದ ಶುಶ್ರೂಷಕಿ ಅಮಾನತು

ಕರ್ತವ್ಯ ಲೋಪ: ಹೊಲಿಗೆ ಬದಲು ಫೆವಿಕ್ವಿಕ್‌ ಹಾಕಿದ್ದ ಶುಶ್ರೂಷಕಿ ಅಮಾನತು

ಬೆಂಗಳೂರು: ಬಾಲಕನ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್‌ ಹಾಕಿ ಕರ್ತವ್ಯ ಲೋಪ ಎಸಗಿದ ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯನ್ನು ಅಮಾನತುಪಡಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಕೆನ್ನೆ ಗಾಯಮಾಡಿಕೊಂಡು ಆಸ್ಪತ್ರೆಗೆ ಬಂದಿದ್ದ 7 ವರ್ಷದ ಬಾಲಕನಿಗೆ ಚಿಕಿತ್ಸೆ ನೀಡಿ ಹೊಲಿಗೆ ಹಾಕುವುದರ ಬದಲಾಗಿ ಫೆವಿಕ್ವಿಕ್‌ ಹಚ್ಚಿ ಕಳುಹಿಸಿದ್ದರು. ಈ ವಿಷಯ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡರು. ಫೆವಿಕ್ವಿಕ್‌ ಒಂದು ಅಂಟು ದ್ರಾವಣವಾಗಿದ್ದು ವೈದ್ಯಕೀಯ ಬಳಕೆಗೆ ನಿಯಮದಲ್ಲಿ ಅವಕಾಶವಿಲ್ಲ.

ಈ ಪ್ರಕರಣದಲ್ಲಿ ಚಿಕಿತ್ಸೆಗೆ ಫೆವಿಕ್ವಿಕ್‌ ಬಳಸಿ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ. ಹಾಗಾಗಿ ಪ್ರಾಥಮಿಕ ವರದಿ ಅನುಸಾರ ಸ್ಟಾಫ್ ನರ್ಸ್‌ ಅನ್ನು ಅಮಾನತುಗೊಳಿಸಿ ಕ್ರಮ ವಹಿಸಲಾಗಿದೆ. ಚಿಕಿತ್ಸೆಗೆ ಒಳಪಟ್ಟ ಮಗು ಆರೋಗ್ಯವಾಗಿದ್ದು ಯಾವುದೇ ಅಡ್ಡ ಪರಿಣಾಮವಾಗದಂತೆ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಪ್ರಕಟನೆಯಲ್ಲಿ ತಿಳಿಸಿದೆ.

RELATED ARTICLES
- Advertisment -
Google search engine

Most Popular