Saturday, April 19, 2025
Google search engine

Homeರಾಜ್ಯಸುದ್ದಿಜಾಲನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ಕೆ ಎಸ್ ಆರ್ ಟಿ ಸಿ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಏಕಪಕ್ಷೀಯ ನಿರ್ಧಾರ: ಪಿ.ಅಶೋಕ್ ಆರೋಪ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ವಿಚಾರದಲ್ಲಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದು ಸಾರಿಗೆ ನೌಕರರ ಕೂಟದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಪಿ.ಅಶೋಕ್ ಆರೋಪಿಸಿದರು.

ಪಟ್ಟಣದ ಸಂಘದ ಕಛೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಕೂಟದ ವತಿಯಿಂದ ೧೭ ಮಂದಿ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದು ನಮಗೆ ಮತದಾರರ ಪೂರ್ಣ ಮಾಹಿತಿ ಇರುವ ಪಟ್ಟಿಯನ್ನು ಅವರು ನೀಡುತ್ತಿಲ್ಲ ಎಂದು ದೂರಿದರು.

ನಮ್ಮ ವಿರುದ್ದ ಸ್ಪರ್ಧಿಸಿರುವ ಎಲ್ಲರಿಗೂ ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಮಡಿಕೇರಿ, ದಕ್ಷಿಣಕನ್ನಡ, ಜಿಲ್ಲೆಗಳ ವ್ಯಾಪ್ತಿಯ ಎಲ್ಲಾ ಘಟಕಗಳ ಮತದಾರ ಸದಸ್ಯರ ಮೊಬೈಲ್ ಸಂಖ್ಯೆ ಸಹಿತ ಮಾಹಿತಿಯನ್ನು ನೀಡಿದ್ದು ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದ ಅವರು ಈ ವಿಚಾರದಲ್ಲಿ ನಮಗೆ ಚುನಾವಣಾಧಿಕಾರಿಗಳು ಮತ್ತು ಸಹಕಾರ ಇಲಾಖೆಯ ಮೇಲಾಧಿಕಾರಿಗಳು ನೆರವಿಗೆ ಬರಬೇಕು ಎಂದು ಕೋರಿದರು.

ಇದರ ಜತೆಗೆ ಸಂಘದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಆ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ ಅವರು ಮತದಾರರ ಸಂಪೂರ್ಣ ಮಾಹಿತಿ ಪಟ್ಟಿ ಕೋರಿ ನಾವು ಅರ್ಜಿ ಸಲ್ಲಿಸಿದರೆ ಅದಕ್ಕೆ ಅಪೂರ್ಣ ಮತ್ತು ಮೊಬೈಲ್ ಸಂಖ್ಯೆ ಇಲ್ಲದಿರುವ ಪಟ್ಟಿ ನೀಡಿ ಹಿಂಬರಹ ಕೊಟ್ಟಿದ್ದು ಇದನ್ನು ಪ್ರಶ್ನಿಸಿದರೆ ದುಂಡಾವರ್ತನೆ ತೋರುತ್ತಾರೆ ಎಂದು ತಿಳಿಸಿದರು.

ಕೂಡಲೇ ನಮಗೆ ಸಂಘದ ಅರ್ಹ ಮತದಾರರ ಪಟ್ಟಿಯನ್ನು ಮೊಬೈಲ್ ಸಂಖ್ಯೆಗಳ ಸಹಿತ ನೀಡದಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು ಇದರೊಂದಿಗೆ ಸಂಘದಲ್ಲಿ ನಡೆದಿರುವ ಅವ್ಯವಹಾರಗಳ ಸಮಗ್ರ ತನಿಖೆಗೆ ಲೋಕಾಯುಕ್ತ ಮತ್ತು ಸಹಾಯಕ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದರು.

ನಾಮಪತ್ರ ಸಲ್ಲಿಕೆ : ಆನಂತರ ಸಾರಿಗೆ ನೌಕರರ ಕೂಟದ ಜೆ.ಕೆ.ಕೆಂಪರಾಜು, ಜಿ.ಎಸ್.ಚೇತನ್, ತಾಂಡವಮೂರ್ತಿ, ಸಿ.ಎಂ.ತೋoಟದಾರ್ಯ, ನಂಜುoಡಸ್ವಾಮಿ, ಭರತ್‌ಕುಮಾರ್, ಸಿ.ವಿ.ಬೀಮೇಶ್, ಪ್ರೇಮಕುಮಾರ್, ಪಿ.ಅಶೋಕ್, ಸಿ.ಸಿ.ಮಂಜುನಾಥ, ಸಿ.ರಾಧ, ಎಂ.ಪಿ.ಶಿವಕುಮಾರಿ, ಶ್ರೀಕಾಂತ್, ಸತೀಶ್, ಸುರೇಶ್ ಹಾದಿಮನಿ, ಹಾಲಪ್ಪನಾಯಕ, ಎಂ.ಸಿ.ಹರೀಶ್‌ಕುಮಾರ್ ಅವರುಗಳು ಚುನಾವಣಾಧಿಕಾರಿ ಕೆ.ಎಲ್.ಸವಿತಾ ಅವರಿಗೆ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular