ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಲಿಗ್ರಾಮ ಪಟ್ಟಣದ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸುವರ್ಣ.ಎನ್ ಆಯ್ಕೆಯಾದರು
ಈ ಹಿಂದೆ ಅಧ್ಯಕ್ಷರಾಗಿದ್ದ ಫಾತಿಮಾ ಉನ್ನಿಸಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಗ್ರಾ.ಪಂ.ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುವರ್ಣ ಮತ್ತು ಅಸ್ಮತ್ ಉನ್ನಿಸಾ ನಾಮಪತ್ರ ಸಲ್ಲಿಸಿದರು ಅಂತಿಮವಾಗಿ ಚುನಾವಣೆ ನಡೆದು ಸುವರ್ಣ ಅವರು 15 ಮತ ಅಸ್ಮತ್ ಉನ್ನಿಸಾ ಅವರು 14 ಮತ ಒಂದು ಮತ ಆಸಿಂದುಗೊಂಡಿದ್ದು ಚುನಾವಣಾ ಅಧಿಕಾರಿಯಾಗಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ರವರು ಸುವರ್ಣ ಅವರ ಆಯ್ಕೆಯನ್ನು ಪ್ರಕಟಿಸಿದರು
ಚುನಾವಣಾ ಸಭೆಯಲ್ಲಿ ಗ್ರಾಪಂನ ಎಲ್ಲಾ 30 ಸದಸ್ಯರು ಭಾಗವಹಿಸಿದ್ದರು.
ಅಧ್ಯಕ್ಷರಾಗಿ ಆಯ್ಕೆಗೊಂಡು ಮಾತನಾಡಿದ ಅಧ್ಯಕ್ಷೆ ಸುವರ್ಣ ರವರು ಮಾತನಾಡಿ ತಮ್ಮ ಅವಧಿಯಲ್ಲಿ ಶಾಸಕ ಡಿ.ರವಿಶಂಕರ್ ನೇತೃತ್ವದಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಮತ್ತು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡುವುದಾಗಿ ತಿಳಿಸಿದರು.
ನಂತರ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್, ನಗರಾಧ್ಯಕ್ಷ ಪ್ರಭಾಕರ್ ಟಿಪಿ ಚಂದು ಕೊತ್ವಾಲ್ ಮಂಜುನಾಥ್ ಮೈಕಲ್ ಗುಣಪಾಳ ಜೈನ್ ಸೇರಿದಂತೆ ಮತ್ತಿತರರು ಅಭಿನಂದಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು