ಮೈಸೂರು: ಭಾರತ ತಾಂತ್ರಿಕತೆಯಲ್ಲಿ ಮುಂದುವರಿದಿದ್ದು, ಹೆಣ್ಣು ಮಕ್ಕಳು ಕೂಡ ಇಂದು ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ದೇಶ ಪ್ರಗತಿ ಹೊಂದಬೇಕಾದರೆ ಹೆಣ್ಣು ಮಕ್ಕಳು ಶಿಕ್ಷಿತರಾಗಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ಅಭಿಪ್ರಾಯಪಟ್ಟರು. ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ಹಾಗೂ ಶರಣಜ್ಯೋತಿ ಪ್ರಸಾರಾಂಗದ ಸಹಯೋಗದೊಂದಿಗೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಸ್ನೇಹಸಿಂಚನ ಹಾಗೂ 2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಕೃತಿ ಬಿಡುಗಡೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ, ಶಿಕ್ಷಣದಿಂದ ಎಷ್ಟೋ ಹೆಣ್ಣು ಮಕ್ಕಳು ವಂಚಿತರಾಗಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಶ್ರೀಗಳು ಮುಖ್ಯ ಕೇಂದ್ರದಲ್ಲಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಅನ್ನದಾಸೋಹ, ಅಕ್ಷರ ದಾಸೋಹ ಈ ಎರಡು ತುಂಬಾ ಶ್ರೇಷ್ಠವಾದದ್ದು. ಈ ಎರಡು ಕಾರ್ಯವನ್ನು ಶ್ರೀಗಳು ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ಕಲಿತ ವಿದ್ಯಾರ್ಥಿನಿಯರು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಂತಹ ಹೆಣ್ಣು ಮಕ್ಕಳ ಕಾಲೇಜನ್ನು ತೆರೆದಿದ್ದು, ಶ್ರೀಗಳ ಮಾರ್ಗದರ್ಶನದಲ್ಲಿ ಶಿಸ್ತು ಎದ್ದು ಕಾಣುತ್ತಿರುವುದು ಶ್ಲಾಘನೀಯ. ಬಸವಣ್ಣನವರ ತತ್ವಗಳನ್ನು ಪ್ರತಿನಿತ್ಯವು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಶಿಕ್ಷಣವಿಲ್ಲದಿದ್ದರೆ ಸಮಾಜದಲ್ಲಿ ಒಳ್ಳೆಯ ಸ್ಥಾನ, ಮಾನವನಿಗೆ ನೀವೆಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡರು, ಒಳ್ಳೆಯ ಸ್ಥಾನ, ಮಾನಗಳನ್ನು ಪಡೆಯಿರಿ ಎಂದು ಹೇಳಿದರು. ಪ್ರತಿಭಾ ಪುರಸ್ಕಾರ ನೆರವೇರಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಮಾತನಾಡಿ, ಸಾಧನೆ ಅಷ್ಟು ಸುಲಭವಲ್ಲ. ಮನಸ್ಸಿನಲ್ಲಿ ಗುರಿ ಇಟ್ಟು ಮುನ್ನಡೆದಾಗ ಮಾತ್ರ ಸಾಧಿಸಲು ಸಾಧ್ಯ. ಹಿಂದೆ ಹೆಣ್ಣು ಮಕ್ಕಳಿಗೆ ಅವಕಾಶಗಳಿಲ್ಲ. ಬಾಲ್ಯದಲ್ಲಿ ತಂದೆಯ ರಕ್ಷಣೆ, ನಂತರ ಗಂಡನ ರಕ್ಷಣೆ, ವೃದ್ಧಾಪ್ಯದಲ್ಲಿ ಮಕ್ಕಳ ರಕ್ಷಣೆ ಇರಬೇಕು ಎಂಬ ಒಂದು ಕಾಲವಿತ್ತು. ಆದರೆ, ಇಂದು ಸಾಕಷ್ಟು ಅವಕಾಶಗಳು ನಮ್ಮ ಮುಂದಿವೆ. ಕಲಿಯಲು ಆಸಕ್ತಿ ಮತ್ತು ಮನಸ್ಸು ಮುಖ್ಯ. ಅದನ್ನು ಪಡೆಯಲು ವಿದ್ಯೆ ತುಂಬಾ ಸಂಪರ್ಕ. ವಿದ್ಯಾರ್ಜನೆ ಮಾಡುವಾಗ ಬೇರೆಯ ಕಡೆ ನಿಮ್ಮ ಗಮನ ಹೋಗಬಾರದು. ಸಮಾಜಮುಖಿ ಕೆಲಸಗಳನ್ನು ಸರಳವಾಗಿ ಮತ್ತು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು. ಆದರ್ಶವಿಲ್ಲದ ಬದುಕಿಗೆ ಅರ್ಥವಿಲ್ಲ, ಸಾರ್ಥಕ ಬದುಕನ್ನು ಬದುಕಬೇಕು ಹಾಗೂ ಕಲಿಯುವ ಆಸೆ ಇದ್ದಾಗ ವ್ಯವಸ್ಥೆ ತನಗೆ ಸಿಗುತ್ತದೆ. ಇದರ ಸದ್ಭಳಕೆ ಮಾಡಿಕೊಳ್ಳುವುದು ವಿದ್ಯಾರ್ಥಿನಿಯರ ಕರ್ತವ್ಯ ಎಂದು ಹೇಳಿದರು. ಶೇಷಾದ್ರಿಪುರಂ ಪದವಿ ಸೌಮ್ಯ ಪ್ರಾಂಶುಪಾಲೆ ಈರಪ್ಪ ಮಾತನಾಡಿ, ಈ ರೀತಿಯ ಪುರಸ್ಕಾರ ಸ್ವೀಕರಿಸುವಾಗ ನಿಮ್ಮ ಪರಿಶ್ರಮ ಹಾಗೂ ಹೆಮ್ಮೆ ಎದ್ದು ಕಾಣುತ್ತದೆ. ಯಾವುದೇ ಸಾಧನೆಗೆ ಛಲ ಮುಖ್ಯ. ಇಂತಹ ವಾತಾವರಣದಲ್ಲಿ ಓದುತ್ತಿರುವ ನೀವೇ ಧನ್ಯರು ಎಂದು ಹೇಳಿದರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ವಿದ್ವಾಂಸರು, ಜ್ಞಾನಿಗಳು ಪ್ರಪಂಚದಾದ್ಯಂತ ಪೂಜಿಸಲ್ಪಡುತ್ತಾರೆ. ಯಾವುದೇ ಜಾತಿ, ವರ್ಣ ಮತಗಳನ್ನು ಬಿಟ್ಟು ಉತ್ತುಂಗದ ಶಿಖರಕ್ಕೇರಬೇಕು. ಶ್ರೀಗಳು ಮಹಿಳಾ ಕ್ಷೇತ್ರದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳ ಬೆಳವಣಿಗೆಗಾಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ. ಶ್ರೀಗಳ ಪರಿಶ್ರಮದ ಫಲ ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ಎಲ್ಲಕ್ಕಿಂತ ಹೆಚ್ಚು ಬೆಲೆಯುಳ್ಳದ್ದು, ಶಾಂತಿ, ಸಂಯಮ, ಏಕಾಗ್ರತೆ ಹಾಗೂ ಶ್ರದ್ಧೆಯ ಮೂಲಕ ನಾವು ಬೆಳೆಯಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸಮಠದ ಅಧ್ಯಕ್ಷ ಚಿದಾನಂದಸ್ವಾಮಿ ವಹಿಸಿದ್ದರು. ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುನೀತಾರಾಣಿ.ವಿ.ಡಿ, ಹಿರಿಯ ಕಲಾವಿದ ಮತ್ತು ಲೇಖಕ ಎಲ್.ಶಿವಲಿಂಗಪ್ಪ.