Saturday, April 19, 2025
Google search engine

Homeರಾಜ್ಯಸುದ್ದಿಜಾಲನಿತ್ಯದ ಜೀವನದ ನಡುವೆ ಕ್ರೀಡೆ ಬಹುಮುಖ್ಯ: ಗಂಗಾಧರ ನಾಯಕ್

ನಿತ್ಯದ ಜೀವನದ ನಡುವೆ ಕ್ರೀಡೆ ಬಹುಮುಖ್ಯ: ಗಂಗಾಧರ ನಾಯಕ್

ವರದಿ: ಸಿ.ಜಿ ಪುನೀತ್, ಚಪ್ಪರದಹಳ್ಳಿ

ಮಡಿಕೇರಿ: ವೈಯಕ್ತಿಕ ಜೀವನದ ಜತೆ ಕೆಲಸದ ಒತ್ತಡದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ದೈಹಿಕ ಶಕ್ತಿ ಹಾಗೂ ಮಾನಸಿಕ ಬಲವನ್ನು ಕ್ರೀಡೆಯಿಂದ ಪಡೆಯಬಹುದು ಎಂದು ಮಡಿಕೇರಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ ನಾಯಕ್ ಹೇಳಿದರು.

ನಗರದ ಜೂನಿಯರ್ ಕಾಲೇಜು ಬಳಿಯ ದಿ ಮೆನ್ಸ್ ಕಾಂಪೌಂಡ್ ಕ್ರೀಡಾಂಗಣದಲ್ಲಿ ಭಾನುವಾರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಡಿಕೇರಿ ಪ್ರಾದೇಶಿಕ ಕಚೇರಿಯಿಂದ ಆಯೋಜಿಸಿದ ವಲಯ ಮಟ್ಟದ ಕ್ರೀಡೆ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಯು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದಢನಾಗುವುನಲ್ಲದೇ ತಮ್ಮ ಕಾಯಕವನ್ನು ಉತ್ಸಾಹದಿಂದ ಮಾಡಲು ಸಾಧ್ಯವಾಗುವುದು ಎಂದರು.

ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಉದಯ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಬದುಕು ಯಾಂತ್ರಿಕವಾಗುತ್ತಿದೆ. ಜನರು ದೆಹಿಕ ಪರಿಶ್ರಮಕ್ಕೆ ಒತ್ತು ಕೊಡುತ್ತಿಲ್ಲ. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಹಕಾರಿಯಾಗಿವೆ. ನಿತ್ಯ ಬ್ಯಾಂಕಿನ ಕೆಲಸದ ಒತ್ತಡ ನಡುವೆ ಇರುವಂತ ನಮ್ಮ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮನೋಲ್ಲಾಸಕ್ಕಾಗಿ ಮೊದಲ ಬಾರಿಗೆ ಈ ಕ್ರೀಡೆ ಆಯೋಜಿಸಲಾಗಿದೆ. ಇದರಿಂದ ಎಲ್ಲರ ಪರಿಚಯದೊಂದಿಗೆ ಕ್ರೀಡಾಪಟುಗಳನ್ನು ಗುರುತಿಸಿ, ಪ್ರೋತ್ಸಾಹಿಸದ ಕೆಲಸವಾಗುತ್ತಿದೆ ಎಂದರು.

ಕ್ರೀಡೆ ಹಿನ್ನಲೆ ಗುಂಡು ಎಸೆತ, ಲೆಮನ್ ಸ್ಫೂನ್ ರೇಸ್, ಓಟದ ಸ್ಪರ್ಧೆ, ಹಿಟ್ ಟು ವಿಕೆಟ್, ಬಾಸ್ಕೆಟ್ ಬಾಲ್, ಫುಟ್ ಬಾಲ್, ರಿಲ್ಲೆ, ಮ್ಯೂಸಿಕಲ್ ಚೇರ್, ಟಗ್ ಆಫ್ ವಾರ್ ಸೇರಿದಂತೆ ವಿವಿಧ ಆಟೋಟಗಳನ್ನು ಆಟಆಡಿಸಲಾಯಿತು. ವಿಜೇತರಿಗೆ ಬಹುಮಾನ ನೀಡಿ ಅಭಿನಂದನೆ ಸಲ್ಲಿಸಲಾಯಿತು. ಆಟೋಟಗಳಲ್ಲಿ ಬ್ಯಾಂಕ್ ಸಿಬ್ಬಂದಿಗಳು ಕುಟುಂಬದೊಂದಿಗೆ ಭಾಗಿಯಾಗಿ ಸಂತಸಪಟ್ಟರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಕಚೇರಿಯ ಹಿರಿಯ ವ್ಯವಸಸ್ಥಾಪಕ ರವಿಚಂದ್ರನ್, ಸಿಎಚ್ಎಲ್ ಅಧಿಕಾರಿಗಳಾದ ವಿನಾಯಕ್, ಮನೋಜ್, ವ್ಯವಸ್ಥಾಪಕಾರದ ಕಿಶೋರ್, ವಲಯದ ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿಗಳು ಸೇರಿದಂತೆ ಇದ್ದರು.

RELATED ARTICLES
- Advertisment -
Google search engine

Most Popular