Sunday, April 20, 2025
Google search engine

Homeರಾಜ್ಯಫೆ.20ರವರೆಗೆ ಮೈಸೂರಿಗೆ ತೆರಳಲು ನಟ ದರ್ಶನ್ ಗೆ ಕೋರ್ಟ್ ಅನುಮತಿ

ಫೆ.20ರವರೆಗೆ ಮೈಸೂರಿಗೆ ತೆರಳಲು ನಟ ದರ್ಶನ್ ಗೆ ಕೋರ್ಟ್ ಅನುಮತಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗಿರುವಂತ ನಟ ದರ್ಶನ್ ಗೆ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಫೆಬ್ರವರಿ 20ರವರೆಗೆ ಮೈಸೂರಿನಲ್ಲಿ ಇರಲು ಅನುಮತಿ ನೀಡಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲುಪಾಲಾಗಿ ಜಾಮೀನು ಪಡೆದು ನಟ ದರ್ಶನ್ ಬಿಡುಗಡೆಯಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿರುವಂತ ಅವರು ವೈದ್ಯರನ್ನು ಭೇಟಿಯಾಗುವ ಸಂಬಂಧ ಮೈಸೂರಿಗೆ ತೆರಳಬೇಕಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.

ಇಂದು ಈ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಾಲಯವು ಫೆಬ್ರವರಿ 20ರವರೆಗೆ ಮೈಸೂರಿಗೆ ತೆರಳಲು, ವೈದ್ಯರನ್ನು ಭೇಟಿಯಾಗಲು ಅನುಮತಿ ನೀಡಿದೆ. ಈ ಮೂಲಕ ನಟ ದರ್ಶನ್ ಗೆ ತಾತ್ಕಾಲಿಕ ರಿಲೀಫ್ ನೀಡಿದೆ.

RELATED ARTICLES
- Advertisment -
Google search engine

Most Popular