ಮಂಡ್ಯ: ಶ್ರೀರಂಗಪಟ್ಟಣದ ಗಂಜಾಮ್ ನಲ್ಲಿರುವ ಟಿಪ್ಪು ಸಮಾಧಿ ಸ್ಥಳ ಗುಂಬಸ್ ಗೆ ರಾಜ್ಯ ವಕ್ಫ್ ಮತ್ತು ಹಜ್ ಖಾತೆ ಸಚಿವ ಜಮೀರ್ ಅಹಮದ್ ಭೇಟಿ ನೀಡಿ, ಟಿಪ್ಪು ಸಮಾಧಿಗೆ ಚಾದರ ಹೊದಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹಮದ್, ರಾಜ್ಯದಲ್ಲಿಮಳೆ ಬೆಳೆಗಾಗಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಬದಲಾವಣೆ ಇಲ್ಲ:
ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ವಿಚಾರವಾಗಿ ಮಾತನಾಡಿ, ಯಾವುದೇ ಬದಲಾವಣೆ ಇಲ್ಲಾ ಎಂದು ಸ್ಪಷ್ಟನೆ ನೀಡಿದರು.
ಸಿಎಂ ಮಾಡೋದು ಗೊತ್ತು ಇಳಿಸೋದು ಗೊತ್ತು ಎಂಬ ಬಿಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಎಂ ಮಾಡೋದು ಬಿಡೋದು ಹರಿಪ್ರಸಾದ್ ಕೈಲೂ ಇಲ್ಲಾ, ನನ್ನ ಕೈಲು ಇಲ್ಲಾ. ನಮ್ಮ ಹೈಕಮಾಂಡ್, ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಿರ್ಧಾರ ಮಾಡುತ್ತಾರೆ ಎಂದರು.
ಬಿಜೆಪಿ, ಜೆಡಿಎಸ್ ಹೊಂದಾಣಿಕೆ ರಾಜಕೀಯದ ವಿಚಾರವಾಗಿ ಮಾತನಾಡಿ, ಅವರ ಹೊಂದಾಣಿಕೆ ಬಗ್ಗೆ ನೀವು ಅವರನ್ನೆ ಕೇಳಿ. ನಾನು ಈಗ ಜೆಡಿಎಸ್ ಪಕ್ಷದಲ್ಲಿ ಇಲ್ಲಾ. ಆ ಪಕ್ಷದ ನಿರ್ಧಾರದ ಬಗ್ಗೆ ನಾನು ಏನು ಹೇಳಲ್ಲ ಎಂದರು.