Sunday, April 20, 2025
Google search engine

Homeಅಪರಾಧಮೈಸೂರು: ಪ್ರಿಯಕರ ಕೈಕೊಟ್ಟಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವತಿ

ಮೈಸೂರು: ಪ್ರಿಯಕರ ಕೈಕೊಟ್ಟಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವತಿ

ಮೈಸೂರು: ಪ್ರಿಯಕರ ಕೈಕೊಟ್ಟಿದ್ಷಕ್ಕೆ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಅರ್. ನಗರ ತಾಲೂಕು ಗೌಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿಸರ್ಗ (20) ಆತ್ಮಹತ್ಯೆ ಮಾಡಿಕೊಂಡ ಯುವತಿ.
ನಿಸರ್ಗ ಕೆ.ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು.‌ 4 ವರ್ಷದಿಂದ ಸುಹಾಸ್ ರೆಡ್ಡಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಪ್ರಿಯಕರ ಸುಹಾಸ್ ರೆಡ್ಡಿ, ನಿಸರ್ಗಳೊಂದಿಗೆ ಎಲ್ಲಾ ಕಡೆ ಸುತ್ತಾಡಿ ಬಳಿಕ ಕೈಕೊಟ್ಟಿದ್ದಾ‌ನೆ. ನಂತರ ಮತ್ತೋರ್ವ ಯುವತಿಯನ್ನು ಪ್ರೀತಿಸುತ್ತಿದ್ದ.


ನಿಸರ್ಗ ಈ ವಿಚಾರವನ್ನು ಸುಹಾಸ್ ತಂದೆ -ತಾಯಿಗೆ ಹೇಳಿದರೂ ಸ್ಪಂದಿಸದೇ ಅವಮಾನಿಸಿದ್ದಾರೆಂದು ಡೆತ್ ನೋಟ್‌ ನಲ್ಲಿ ಬರೆದಿದ್ದಾಳೆ.
ನನ್ನ ಸಾವಿಗೆ ಅನನ್ಯ, ಸುಹಾಸ್ ಹಾಗೂ ತಂದೆ ಗೋಪಾಲಕೃಷ್ಣ ಕಾರಣ. ಅವರನ್ನು ಸುಮ್ಮನೆ ಬಿಡಬೇಡಿ ಅಪ್ಪ, ನನ್ನನ್ನು ಕ್ಚಮಿಸಿಬಿಡಿ ಎಂದು ಡೆತ್ ನೋಟ್ ನಲ್ಲಿ ಹೇಳಿದ್ದಾಳೆ.
ಸಾವಿಗೆ ಮುನ್ನ ಕೈ ಕೊಯ್ದುಕೊಂಡು ನೊಂದ ಯುವತಿ ರೀಲ್ಸ್ ಮಾಡಿದ್ದಾಳೆ. ಬಳಿಕ ವಿಷಸೇವಿಸಿ ಅಸ್ಪತ್ರೆಗೆ ದಾಖಲಾಗಿದ್ದ ನಿಸರ್ಗ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ನಿಸರ್ಗ ಡೆತ್ ನೋಟ್ ಆಧರಿಸಿ ಕೆ.ಆರ್.ನಗರ ಪೊಲೀಸರು ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular