Sunday, April 6, 2025
Google search engine

Homeಅಪರಾಧಕಾನೂನುಇನ್ಮುಂದೆ ಇಮೇಲ್‌ನಲ್ಲಿ ಎಲ್ಲ ಕೋರ್ಟ್‌ ನೋಟಿಸ್, ಸಮನ್ಸ್

ಇನ್ಮುಂದೆ ಇಮೇಲ್‌ನಲ್ಲಿ ಎಲ್ಲ ಕೋರ್ಟ್‌ ನೋಟಿಸ್, ಸಮನ್ಸ್

ಬೆಂಗಳೂರು: ರಾಜ್ಯದ ಎಲ್ಲಾ ನ್ಯಾಯಾಲಯಗಳು ಇನ್ಮುಂದೆ ಇ-ಮೇಲ್‌ ಮೂಲಕ ನೋಟಿಸ್ ಮತ್ತು ಸಮನ್ಸ್ ಜಾರಿಗೊಳಿಸಲು ಅನುಕೂಲವಾಗುವಂತೆ ಅಗತ್ಯ ತಿದ್ದುಪಡಿ ನಿಯಮ ರೂಪಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ವಕೀಲರಾದ ಅನಿರುದ್ಧ್ ಸುರೇಶ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರ ಪೀಠಕ್ಕೆ ರಾಜ್ಯ ಸರ್ಕಾರ ಈ ಕುರಿತು ಪ್ರಮಾಣ ಪತ್ರ ಸಲ್ಲಿಸಿದೆ.

ರಾಜ್ಯದ ಎಲ್ಲಾ ನ್ಯಾಯಾಲಯಗಳು ಇನ್ಮುಂದೆ ಇ-ಮೇಲ್ ಮೂಲಕ ನೋಟಿಸ್ ಮತ್ತು ಸಮನ್ಸ್ ಜಾರಿಗೊಳಿಸಲು ಅನುಕೂಲವಾಗುವಂತೆ ಅಗತ್ಯ ತಿದ್ದುಪಡಿ ನಿಯಮ ರೂಪಿಸಲಾಗಿದೆ. ಇ-ಮೇಲ್ ಮೂಲಕ ನೋಟಿಸ್ ಜಾರಿ ಮಾಡಲು ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸಿ ಅನುಮೋದಿಸುವ ತುರ್ತು ಅಗತ್ಯವಿದೆ. ಹೀಗಾಗಿ ನಿಯಮಗಳ ತಿದ್ದುಪಡಿಗೆ ಹೈಕೋರ್ಟ್ ಮಾಡಿರುವ ಶಿಫಾರಸುಗಳ ಬಗ್ಗೆ ಫೆಬ್ರವರಿ 25ರೊಳಗೆ ಮಾಹಿತಿ ನೀಡುವಂತೆ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಈ ಹಿಂದೆ ಸೂಚಿಸಿತ್ತು.

ಇದೀಗ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿ ಹೈಕೋರ್ಟ್ ರವಾನಿಸಿದ ಕರಡು ನಿಯಮಗಳನ್ನು ಫೆಬ್ರವರಿ 17ರಂದು ರಾಜ್ಯ ಸರ್ಕಾರ ಅನುಮೋದಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಇ- ಮೇಲ್ ಮೂಲಕ ಕೋರ್ಟ್ ನೋಟಿಸ್ ಸಮನ್ಸ್ ಜಾರಿಗೊಳಿಸಲು ಅಗತ್ಯ ತಿದ್ದುಪಡಿ ನಿಯಮ ರೂಪಿಸಲಾಗಿದೆ.

RELATED ARTICLES
- Advertisment -
Google search engine

Most Popular