ಹನಗೋಡು: ಹನಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್‌ವತಿಯಿಂದ ‘ಬಿ’ ಮಾನ್ಯತೆ ದೊರೆತಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜು ತಿಳಿಸಿದ್ದಾರೆ.
ಕಳೆದ ತಿಂಗಳು ನ್ಯಾಕ್ ಪೀರ್ ಕಮಿಟಿಯು ಭೇಟಿ ನೀಡಿ ಕಾಲೇಜಿನ ಶೈಕ್ಷಣಿಕ ಹಾಗೂ ಇನ್ನಿತರ ಪ್ರಗತಿಯನ್ನು ಪರಿಶೀಲಿಸಿ ನೀಡಿದ ವರದಿ ಆಧಾರದ ಮೇಲೆ ನ್ಯಾಕ್ ಸಂಸ್ಥೆಯು ಬಿ ಮಾನ್ಯತೆ ನೀಡಿದೆ. ಕಾಲೇಜು ಆರಂಭವಾಗಿ ಕಳೆದ ೧೬ ವ?ಗಳ ನಂತರ ಪ್ರಥಮ ಬಾರಿಗೆ ನ್ಯಾಕ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿತ್ತು. ಬಿ ಮಾನ್ಯತೆ ದೊರೆಯಲು ಕಾಲೇಜಿನ ಸವಾಂಗೀಣ ಪ್ರಗತಿಗೆ ಸಹಕರಿಸಿದ ಸಿಡಿಸಿ ಅಧ್ಯಕ್ಷರಾದ ಶಾಸಕ ಜಿ.ಡಿ.ಹರೀಶ್‌ಗೌಡರು. ಮಾಜಿ ಶಾಸಕರದ ಎಚ್ ಪಿ ಮಂಜುನಾಥ್ ಸೇರಿದಂತೆ ಸಮಿತಿಯ ಸದಸ್ಯರು, ಸಂಘ-ಸಂಸ್ಥೆಗಳು, ದಾನಿಗಳು, ಗ್ರಾಮಸ್ಥರು, ಅಧ್ಯಾಪಕರು, ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಬಿ ಮಾನ್ಯತೆ ದೊರೆತಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.