ಮೈಸೂರು: ದೇಶದಲ್ಲಿಚರ್ಚೆಯಾಗುತ್ತಿರುವ ಸಮಸ್ಯೆಗಳಿಗೆ ಮಹದೇವಪ್ಪಅವರ ಸಂವಿಧಾನ ನೆರಳಿನಲ್ಲಿ ಕೃತಿ ಪರಿಹಾರಒದಗಿಸುತ್ತದೆಎಂದು ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.
ಕಲಾಮಂದಿರಲ್ಲಿಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿಗಳ ಬಗಳ ಹಾಗೂ ಅಮೂಲ್ಯ ಪುಸ್ತಕ ಪ್ರಕಾಶನ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಡಾ.ಎಚ್.ಸಿ ಮಹಾದೇವಪ್ಪ ರಚಿಸಿರುವ ಸಂವಿಧಾನ ನೆರಳಲ್ಲಿ ಸಾಮಾಜಿಕ-ರಾಜಕೀಯ ಬರಹಗಳ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿಅವರು ಮಾತನಾಡಿದರು.
ಈ ರಾಜ್ಯಕ್ಕೆ ವಿಧಾನಸೌಧ ನೀಡಿದಕೆಂಗಲ್ ಹನುಮಂತಯ್ಯ ಆಗಲಿ, ಅಭಿವೃದ್ಧಿಯ ಹರಿಕಾರರಾಗಿದ್ದದೇವರಾಜಅರಸು ಆಗಲಿ ತಮ್ಮಅತ್ಯಮೂಲ್ಯ ಆಲೋಚನೆಗಳನ್ನು ಸಂಗ್ರಹಿಸುವ ಕೆಲಸಕ್ಕೆ ಕೈಹಾಕದಕಾರಣ ನಾವು ಇಂತಹ ಮಹನೀಯರ ಹಲವಾರು ವಿಚಾರಗಳನ್ನು ಕಳೆದುಕೊಂಡವು. ಆದರೆ, ಸಚಿವ ಮಹದೇವಪ್ಪಅವರುತಮ್ಮರಾಜಕೀಯಜೀನನದಲ್ಲಿಕಂಡದನ್ನುಕಂಡಹಾಗೆ ಬರೆದಿಡುವಂತಹಉತ್ತಮ ಕೆಲಸ ಮಾಡಿದ್ದಾರೆ. ಈ ಪುಸ್ತಕದಲ್ಲಿಯಾವುದೇರೀತಿಯಉಪಮಾನ, ಉಪಮೇಯಇಲ್ಲ. ಇಲ್ಲಿರುವ ವಿಚಾರಗಳು ಇಂದು ನಮ್ಮ ನಡುವೆ ನಡೆಯುತ್ತಿರುವಂತ ಹಲವಾವರು ಸಮಸ್ಯೆಗಳಿಗೆ ಸಂವಿಧಾನ ಹೇಗೆ ಪರಿಹಾರ ನೀಡುತ್ತದೆಎಂಬುದ್ನುತಮ್ಮ ಸ್ವಂತಅನಭವದ ಮೂಲಕ ಬರೆದಿದ್ದಾರೆ. ಇಂದಿನ ಯುವಜನಾಂಗಕ್ಕೆ ಈ ಪುಸ್ತಕ ಕೈಪಿಡಿಯಾಗಬೇಕುಎಂದು ಹೇಳಿದರು.
ತಿನ್ನುನಆಹಾರ ಹಾಗೂ ಅಲಕ್ಷಿತ ಸಮುದಾಯಗಳ ಬಗ್ಗೆ ನಾನು ಮಾತನಾಡಿದ್ದಕ್ಕೆ ಹಲವರುಅದನ್ನುಉಪಮೇಯ ಮಾಡಲು ಯತ್ನಿಸಿದರು. ಆಗ ಸಂವಿಧಾನ ಬಲವಾಗಿ ಸಮರ್ಥಿಸಿಕೊಂಡರೆ, ಭೀಮ ಸೇನೆ ನನಗೆ ಬೆಂಬಲ ನೀಡಿತು. ಅಂದು ಮಲೈ ಮಹದೇಶ್ವರನತಪ್ಪಲಿನಿಂದ ಬೀದರ್‌ವರೆಗೂ ಸಹಸ್ರಾರು ಭೀಮ ಅನುಯಾಯಿಗಳು ನನ್ನ ಪರಧ್ವನಿ ಎತ್ತಿದರುಎಂದು ಸ್ಮರಿಸಿದರು.
ಸಂವಿಧಾನ ಬಲವಾಗಿರುವುದರಿಂದ ನಾವು ಅದರ ನೆರಳಲ್ಲಿ ಇದ್ದೇವೆ. ಸಂವಿಧಾನದ ನೆರಳಲ್ಲಿ ಕಣ್ಣು ಬಿಟ್ಟು ಕನಸು ಕಾಣಬೇಕು. ಕನಸನ್ನು ಸಾಕಾರ ಮಾಡಲು ಶ್ರಮವಹಿಬೇಕು. ಅಂಬೇಡ್ಕರ್‌ಅವರು ಸ್ವಾತಂತ್ರ್ಯ ಸಂದರ್ಭದಲ್ಲಿದೇಶವನ್ನು ಒಗ್ಗೂಡಿಸಿದರು. ಈ ಪುಸ್ತಕವನ್ನು ನಾನು ಬಹಳ ಪ್ರೀತಿಯಿಂದಓದಿದ್ದೆ. ಇದು ಹಾಡು ಮಾತಿನಂತಿದೆಎಲ್ಲಿಯೂ ತೊಡಕುಗಳಿಲ್ಲ. ಅಲ್ಲದೇ ನೇರ ಮಾತಿನ ಬಡಿಗೆಯೂ ಹೌದು. ಒಬ್ಬರಾಜಕಾರಣಿ ನೇರ ಮಾತಿನ ಬಡಿಕೆತೆಗೆದುಕೊಂಡು ಹೇಳುವುದು ಒಳ್ಳೆಯದೆ ಎಂದರು.
ವಿಮರ್ಶಕ ಡಾ.ಕೆ.ವೈ.ನಾರಾಯಣಸ್ವಾಮಿ ಮಾತನಾಡಿ, ಮಹದೇವಪ್ಪಅವರು ನಮ್ಮ ನಡುವಿನ ಅಪರೂಪದರಾಜಕಾರಣಿ. ಸಂವಿಧಾನ ನೆರಳಿನಲ್ಲಿ ಪುಸ್ತಕ ಸಾಮಾಜಿಕ ವ್ಯವ್ಯಸ್ಥೆ ಬಗ್ಗೆ ಅವರ ೧೨೦ ಪ್ರತಿಕ್ರಿಯೆಗಳನ್ನು ಒಳಗೊಂಡಿದೆ. ಅನೇಕರು ಇಂದಿನ ವಿದ್ಯಮಾನಗಳಿಗೆ ಸ್ಪಂದಿಸುವಂತಹ ಗುಣಗಳನ್ನು ಕಳೆದುಕೊಂಡಿದ್ದಾರೆ. ಮನುಷ್ಯತ್ವಇರುವಯಾವುದೇವ್ಯಕ್ತಿಯೂ ಮಣಿಪುರದ ಹೇಯಕೃತ್ಯದ ಬಗ್ಗೆ ಸ್ಪಂದಿಸದೇಇರಲು ಸಾಧ್ಯವಿಲ್ಲ. ಹಿಜಾಬ್, ಹಲಾಲ್, ಕೋಮುವಾದ, ಜಾತಿಕ್ರೌರ್ಯದ ಬಗ್ಗೆ ಮಾತನಾಡೆದೇ, ತಮಗೆ ಅನುಕೂಲ ಸಿಂದುವಾಗುವ ರಾಜಕಾರಣದ ಬಗ್ಗೆ ಮಾತನಾಡುವವರೇಇಂದು ಹೆಚ್ಚಾಗುತ್ತಿದ್ದಾರೆಎಂದು ಬೇಸರ ವ್ಯಕ್ತಪಡಿಸಿದರು.
ಅನೇಕ ರಾಜಕಾರಣಿಗಳು ವೇದಿಕೆಗೆ ತಕ್ಕಂತೆ ಮಾತನಾಡುತ್ತಾರೆ. ಇದುಅಪಾಯಕಾರಿ. ನಮ್ಮ ಅಲೋಚನೆಗಳನ್ನು ಪ್ರತಿಪಾದಿಸುಯವಾಗ ಸಂವಿಧಾನ ಆಶಯಗಳಿಗೆ ಧಕ್ಕೆಯಾಗದಂತೆ ಪ್ರತಿಪಾದಿಸಬೇಕು. ಈ ವಿಚಾರದಲ್ಲಿ ಮಹಹೇವಪ್ಪಅವರುತಮಗೆಕಂಡಿದ್ದನ್ನುಕಂಡಂಗೆ ಪ್ರತಿಕ್ರಿಯಿಸಿzರೆ. ಸಮಾಜದ ಕಷ್ಟಗಳಿಗೆ ಭಾವನಾತ್ಮಕವಾಗಿ ಸ್ಪಂದಿಸುವುದು ಸುಲಭ. ಆದರೆ, ಸಂವಿಧಾನಾತ್ಮಕವಾಗಿ ಸ್ಪಂದಿಸಬೇಕಾದರೆತಯಾರಿಅಗತ್ಯ. ಈ ವಿಚಾರದಲ್ಲಿ ಮಾಕ್ಸ್ ಮತ್ತುಅಂಬೇಡ್ಕರ್‌ಅವರ ಚಿಂತನೆಗಳು ಅವರಿಗೆಧೈರ್ಯತುಂಬಿವೆ ಎಂದು ಹೇಳಿದರು.
ಅಂಬೇಡ್ಕರ್ ಸಂವಿಧಾನದ ಬಗ್ಗೆ ರಾಜಕಾರಣಿಗಳಿಗಿಂತಲೂ ಯೋಜನೆಗಳನ್ನು ಅನುಷ್ಠಾನಗೊಳಿಸುವ ಅಧಿಕಾರಿಗಳಲ್ಲೆ ಹೆಚ್ಚು ತಾತ್ಸಾರವಿದೆ. ಸಂವಿಧಾನದಕುರಿತುಐಎಎಸ್ ಮತ್ತುಕೆಎಎಸ್ ಅಧಿಕಾರಿಗಳಿಗೆ ಕಾರ್ಯಗಾರ ಮಾಡುವುದು ಬಹಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸ್ಪೀಕರ್ ಯು.ಟಿಖಾದರ್‌ಕ್ರಮಕೈಗ್ಳೊಬೇಕಿದೆಎಂದು ಹೇಳಿದರು.
ಸಮಾರಂಭದಲ್ಲಿ ಪ್ರಗತಿಪರಚಿಂತಕರು, ಡಾ.ಎಚ್.ಸಿ ಮಹದೇವಪ್ಪಅವರು ಅಭಿಮಾನಗಳು ಹಾಗೂ ಹಿತೈಹಿಸಿಗಳು ಹಾಜರಿದ್ದರು.