ಪಿರಿಯಾಪಟ್ಟಣ : ಚಿರತೆಯೊಂದು ದಾಳಿ ಮಾಡಿ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸುಗಳಿಗೆ ಗಾಯ ಮಾಡಿ ಕರುವನ್ನು ಕೊಂದುಹಾಕಿರುವ ಘಟನೆ ನಡೆದಿದೆ.
ತಾಲೂಕಿನ ಮುತ್ತೂರು ಗ್ರಾಮದ ಕಾಳೇಗೌಡ ಎಂಬುವವರಿಗೆ ಸೇರಿದ ಮನೆಯಲ್ಲಿ ಹಸುಗಳನ್ನು ಕಟ್ಟಿಹಾಕಲಾಗಿದ್ದು ಗುರುವಾರ ತಡರಾತ್ರಿ ಕೊಟ್ಟಿಗೆಗೆ ದಾಳಿ ಮಾಡಿರುವ ಚಿರತೆ ಮನೆಯಲ್ಲಿ ಕಟ್ಟಿಹಾಕಲಾಗಿದ್ದು ಮೂರು ಹಸುಗಳಿಗೆ ಗಾಯ ಮಾಡಿ ಕರುವನ್ನು ಕೊಂದುಹಾಕಿ ಪರರಾಗಿಯಾಗಿದೆ. ಈ ಬಗ್ಗೆ ಅರಣ್ಯಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು.ಹಲವು ದಿನಗಳಿಂದ ಚಿರತೆ ಕಾಟ ಹೆಚ್ಚಾಗಿದ್ದು ಬೋನ್ ಅಳವಡಿಸಿ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.