Sunday, April 20, 2025
Google search engine

Homeಸ್ಥಳೀಯಯುವಕರ ವರ್ತನೆಯಿಂದದೇಶದ ಭವಿಷ್ಯದಚಿಂತೆಕಾಡುತ್ತದೆ

ಯುವಕರ ವರ್ತನೆಯಿಂದದೇಶದ ಭವಿಷ್ಯದಚಿಂತೆಕಾಡುತ್ತದೆ

ಮೈಸೂರು: ಕಾಲೇಜು ವಿದ್ಯಾರ್ಥಿಗಳನ್ನು ಕಾಲುದಾರಿಯಿಂದ ಹೆದ್ದಾರಿಗೆತರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತದೆ. ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಇಪ್ಪತ್ತು ಕೃಪಾಂಕಗಳನ್ನು ಕೊಡಬೇಕೆಂದುಕರೆದಿರುವುದನ್ನು ನೋಡಿದಾಗ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಮತ್ತು ಆಲೋಚನಾ ಶಕ್ತಿಗೇ ನಾವು ರಜೆಕೊಟ್ಟಂತೆಕಾಣುತ್ತದೆ. ಹದಿಹರೆಯದ ಮಕ್ಕಳು ತಂದೆತಾಯಿಯೊಂದಿಗೆ, ಹಿರಿಯರೊಂದಿಗೆ ಮತ್ತು ಸಹವರ್ತಿಗಳೊಂದಿಗೆ ಅಚಾತುರ್ಯದಿಂದ ನಡೆದುಕೊಂಡ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಓದುವಾಗ, ನೋಡುವಾಗದೇಶದ ಭವಿಷ್ಯದ ಬಗ್ಗೆ ಚಿಂತೆಕಾಡುತ್ತದೆಎಂದುಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.
ನಗರದಊಟಿರಸ್ತೆಯಲ್ಲಿರುವಜೆಎಸ್‌ಎಸ್ ಪದವಿಪೂರ್ವಕಾಲೇಜಿನ ೨೦೨೩-೨೪ನೇ ಸಾಲಿನ ಸಾಂಸ್ಕೃತಿಕ ವೇದಿಕೆ ಮತ್ತುಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕವಾಗಿ ಸಂಸ್ಕೃತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಕಲೆಯಾಗಿ ಅರಳಿಸಬೇಕು. ಭ್ರಷ್ಟಾಚಾರದೇಶಕ್ಕೆ ಹಾನಿ. ಜಾತಿ ಸಮಾಜಕ್ಕೆ ಹಾನಿ. ಕ್ರೀಡೆಯಲ್ಲಿಜಾತಿಗೆಅವಕಾಶವಿಲ್ಲ. ಧರ್ಮದಲ್ಲಿಜಾತಿ ಸೇರಿಕೊಂಡರೆದೇಶದಅವನತಿ. ಜಾತಿವ್ಯವಸ್ಥೆಯನ್ನುಕಿತ್ತೊಗೆದರೆ ಮಾತ್ರದೇಶದ ಪ್ರಗತಿ. ವಿದ್ಯಾರ್ಥಿಗಳು ತಮ್ಮಅಂತಃಶಕ್ತಿ, ಧೀಃಶಕ್ತಿಗಳನ್ನು ಬಳಸಿಕೊಂಡು ಸಾಧನೆಯ ಹಾದಿಯಲ್ಲಿ ಮುಂದುವರಿಯಬೇಕು. ವಿದ್ಯಾರ್ಥಿಗಳು ಸಂಸ್ಕೃತಿ ಮತ್ತು ಪರಿಸರವನ್ನು ಉಳಿಸಬೇಕು, ಕನ್ನಡವನ್ನುಓದುವುದು, ಬಳಸುವುದು ಮತ್ತು ಮಾತಾಡುವುದರ ಮೂಲಕ ಕನ್ನಡವನ್ನೂ ಉಳಿಸಬೇಕು. ಪರಮಪೂಜ್ಯರಾಜೇಂದ್ರ ಶ್ರೀಗಳವರ ದೂರದೃಷ್ಟಿಯ ಫಲವಾಗಿ ಕಾಲೇಜಿನಲ್ಲಿದೊರೆಯುತ್ತಿರುವಎಷ್ಟೆಲ್ಲ ಸೌಕರ್ಯಗಳನ್ನು ಸಾರ್ಥಕವಾಗಿ ಬಳಸಿಕೊಂಡು ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮವನ್ನು ಪ್ರಸ್ತಾವಿಸಿ ಮಾತನಾಡಿದಕಾಲೇಜು ಸಮುಚ್ಚಯದ ಮುಖ್ಯಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಅವರು, ಶಾಲಾಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ವ್ಯಕ್ತಿತ್ವ ಬೆಳೆಸುವ ಸಂಪನ್ಮೂಲ ಕೇಂದ್ರಗಳಾಗಬೇಕು. ಪಠ್ಯಗಳಷ್ಟೇ ಪಠ್ಯೇತರ ಚಟುವಟಿಕೆಗಳು ಸಹ ಬಹಳ ಮುಖ್ಯ. ವ್ಯಕ್ತಿತ್ವ ವಿಕಸನ, ಕ್ರೀಡಾ ಮನೋಭಾವ ಮತ್ತು ಶಿಸ್ತು ಬೆಳೆಸಿಕೊಳ್ಳಲು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವೇದಿಕೆಯಾಗುತ್ತವೆಎಂದರು.
೨೦೨೨-೨೩ನೇ ಶೈಕ್ಷಣಿಕ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿದ ಬೇಲೂರು ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕಿನಾಗಶ್ರೀ ತ್ಯಾಗರಾಜ್ ಮಾತನಾಡಿ, ಕನಸಿಗೆ ಆಡಚಣೆಯಿಲ್ಲದ ನಿದ್ರೆ ಬೇಕು. ಗುರಿಗೆ ನಿದ್ರೆಯೇಅಡಚಣೆ. ಪರಿಶ್ರಮ, ಚತುರತೆ, ಚುರುಕುತನ ಮತ್ತು ಸಂಘಟನಾತ್ಮಕಕಾರ್ಯನಿರ್ವಹಣೆಯ ಕಲೆಗಳು ಇದ್ದಾಗ ಮಾತ್ರಗುರಿಮುಟ್ಟುವುದು ಸುಲಭ. ಕನ್ನಡವನ್ನು ಉಳಿಸುವುದು, ಬೆಳೆಸುವುದು ಎಷ್ಟು ಮುಖ್ಯವೋ ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿಇಂಗ್ಲಿಷ್‌ಕಲಿಯುವುದೂ ಅಷ್ಟೇ ಮುಖ್ಯಎಂದುಅಭಿಪ್ರಾಯಪಟ್ಟರು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಅಂತಾರಾಷ್ಟ್ರೀಯ ಖೋಖೋ ಕ್ರೀಡಾಪಟುಕು.ಎಂ.ವೀಣಾಕ್ರೀಡೆದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಲು ಬಹಳ ಮುಖ್ಯ. ಯಾವುದೇಕ್ಷೇತ್ರದಲ್ಲಾದರೂ ಸಾಧನೆಗೆಕೊನೆಯಿಲ್ಲ. ಸಾಧನೆಗೆ ಬಹಳ ಪರಿಶ್ರಮ ಬೇಕು. ಪರಿಶ್ರಮವನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರಯಶಸ್ಸು ಲಭಿಸುತ್ತದೆಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕಪ್ರೊ.ಆರ್.ಮೂಗೇಶಪ್ಪ ಸಮಾರಂಭದಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular