ಮೈಸೂರು: ವಿದ್ಯಾರ್ಥಿಗಳು ಚಂಚಲತೆಯನ್ನು ಬಿಟ್ಟುಉತ್ತಮರೀತಿಯಲ್ಲಿ ವ್ಯಾಸಂಗ ಮಾಡುವ ಮೂಲಕ ತಮ್ಮಗುರಿಯತ್ತ ಮುನ್ನುಗ್ಗಬೇಕುಎಂದು ಶಾಸಕ ಕೆ.ಹರೀಶ್‌ಗೌಡ ಸಲಹೆ ನೀಡಿದರು.
ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾಕಾಲೇಜು ವತಿಯಿಂದಕಾಲೇಜಿನಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ವೇದಿಕೆ ೨೦೨೨-೨೦೨೩ ಸಮಾರೋಪ ಸಮಾರಂಭದಲ್ಲಿ ಮಾತನಾಡಿದಅವರು, ಯಾವುದೇದೇಶದಅಭಿವೃದ್ಧಿಯಲ್ಲಿ ಶಿಕ್ಷಣ ಕೂಡ ಮಹತರ ಪಾತ್ರ ವಹಿಸುತ್ತದೆ. ಆದ್ದರಿಂದ ವಿದ್ಯಾರ್ಥಿನಿಯರು ಮನಸನ್ನುತಮ್ಮ ಶಿPಣ ಮತ್ತು ವ್ಯಾಸಂಗದತ್ತಕೇಂದ್ರಿಕರಿಸುವ ಮೂಲಕ ಉತ್ತಮ ವಿದ್ಯಾಭ್ಯಾಸ ಮಾಡಬೇಕುಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇತಯಾರಿ ನಡೆಸಬೇಕು. ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಯನ್ನು ಗುರುಗಳು ಗುರುತಿಸಿ, ಅದಕ್ಕೆ ಪೂರಕವಾಗಿಅವರಿಗೆ ಮಾರ್ಗದರ್ಶನ ಮಾಡಬೇಕು. ವಿದ್ಯಾರ್ಥಿಗಳು ಅವರ ಸಲಹೆಗಳನ್ನು ಪಡೆದುತಮ್ಮ ಭವಿಷ್ಯದಲ್ಲಿಉತ್ತಮ ಸ್ಥಾನಮಾನವನ್ನು ಪಡೆದುಕಾಲೇಜು ಮತ್ತು ಪಾಲಕರಿಗೆಕೀರ್ತತರಬೇಕುಎಂದರು.
ಈ ಕಾಲೇಜಿನಲ್ಲಿ ಹೆಚ್ಚುವರಿಕಟ್ಟಡ ನಿರ್ಮಾಣ ಈಗಾಗಲೇ ೮೯ ಕೋಟಿರೂ. ಮಂಜೂರುಆಗಿದೆ. ಆದರೆ, ತಾಂತ್ರಿಕಕಾರಣದಿಂದಅದನ್ನು ಬಳಸಿಕೊಳ್ಳಲು ಆಗಿಲ್ಲ. ಅದು ಶೀಘ್ರ ಇದು ಬಳಕೆಯಾಗುವ ಮೂಲಕ ಕಾಲೇಜುಅಭಿವೃದ್ಧಿಯಾಗುತ್ತದೆ. ಹಾಸ್ಟೆಲಅಭಿವೃದ್ಧಿಯ ಬಗ್ಗೆ ಚಿಂತನೆಇದ್ದು, ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ಹಾಗೆ ಕಾಲೇಜು ಬಳಿಗೆ ಸಾರಿಗೆ ಬಸ್ಸು ಬರುವ ವ್ಯವಸ್ಥೆ ಮಾಡಲು ಸಂಬಂಧಪಟ್ಟಅಧಿಕಾರಿಗೆ ಸೂಚಿಸಲಾಗುವುದುಎಂದರು.
ಚಿತ್ರನಟಧನ್‌ವೀರ್‌ಗೌಡ ಮಾತನಾಡಿ, ವಿದ್ಯಾರ್ಥಿನಿಯರುತಮ್ಮಗುರಿಯೇನಿದೆಯೋಅದರ ಗಮನ ಕೊಡಿ, ತಾವು ಸಾಗುವ ಮಾರ್ಗದಲ್ಲಿಯಾವುದೇಅಪಮಾನ, ಅಡ್ಡಿ-ಆತಂಕಗಳು ಬಂದರೂ, ಕುಗ್ಗಬೇಡಿ. ಧೈರ್ಯವಾಗಿ ಸಾಧನೆ ಮಾಡಿಎಂದರು.
ಇದೇ ವೇಳೆ ವಿವಿಧ ವಿಭಾಗಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಎಂ.ಆರ್.ಛಾಯಾ, ಪವಿತ್ರಾ (ಎಂ.ಕಾಂ), ಎನ್.ಎಲ.ಸಿಂಚನಾ, ಎಚ್.ಎಲ.ತೇಜಸ್ವಿನಿ (ಎಂಬಿಎ), ಜೆ.ರಕ್ಷಿತಾ, ಜೆ.ಅಲ್ಯೋ ಸೈ, ಸುಶ್ಮಿತಾ ಬಾಲಚಂದ್ರ ಹೆಗಡೆ (ಬಿ.ಕಾಂ), ಲಮಿಯಾ ಹುಡಾ, ಆರ್.ಪಿ.ಪ್ರೀತಿ (ಬಿಬಿಎ) ಮತ್ತು ಎನ್‌ಸಿಸಿ ಬೆಸ್ಟ್‌ಕೆಡೆಟ್‌ಚಂದ್ರಿಕಾ, ಅಮೃತಾ, ಅಶ್ವಿನಿ, ರಶ್ಮಿ ಅವರಿಗೆದತ್ತಿ ಬಹುಮಾನವನ್ನು ನೀಡಲಾಯಿತು. ಅಲ್ಲದೇ, ಕಾಲೇಜಿನಲ್ಲಿ ವಿವಿಧ ಸಾಂಸ್ಕತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಪ್ರಾಂಶುಪಾಲ ಪ್ರೊ.ಸೋಮಣ್ಣ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಬಿ.ರವಿಶಂಕರ್, ಖಜಾಂಚಿ ಪ್ರೊ.ಎಚ್.ಎಸ್.ಧನಲಕ್ಷ್ಮಿ, ಐಕ್ಯೂಎಸಿ ಸಂಚಾಲಕ ಡಾ.ವಿ.ಮಂಜುನಾಥ್, ವಿದ್ಯಾರ್ಥಿ ವೇದಿಕೆ ಅಧ್ಯಕ್ಷೆಎಂ.ಚಂದನಾಇದ್ದರು.
ತಲೆಸುತ್ತಿ ಬಿದ್ದ ವಿದ್ಯಾರ್ಥಿನಿ: ವೇದಿಕೆ ಕಾರ್ಯಕ್ರಮದ ವೇಳೆ ವಿದ್ಯಾತ್ನೀಯರುಜಾನಪದ ನೃತ್ಯ ಪ್ರದರ್ಶಿಸಿದರು. ನೃತ್ಯ ಮುಗಿದ ಬಳಿಕ ನೃತ್ಯ ಮಾಡಿದ ವಿದ್ಯಾರ್ಥಿನಿಯೊಬ್ಬರುತಲೆಸುತ್ತಿ ಕೆಳಗೆ ಬಿದ್ದರು. ಇದರಿಂದಕಾರ್ಯಕ್ರಮದಲ್ಲಿ ನೆರದಿದ್ದಗಣ್ಯರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಆತಂಕಗೊಂಡರು. ತಕ್ಷಣ ಕೆಳಗೆ ಬಿದ್ದ ವಿದ್ಯಾರ್ಥಿನಿಗೆ ನೀರು ಕುಡಿಸಿ ಚೇತರಿಸಿಕೊಳ್ಳುವಂತೆ ಮಾಡಿದರು.