ಮಂಡ್ಯ :ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗಲಿ ಚಿಪ್ಸ್ ಗೋದಾಮು ಸಂಪೂರ್ಣ ನಾಶವಾಗಿದೆ. ಮಂಡ್ಯ ನಗರದ ಸಾಹುಕಾರ್ ಚೆನ್ನಯ್ಯ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು ಬೆಂಕಿಗೆ ಫ್ಯಾಕ್ಟರಿಯಲ್ಲಿದ್ದ ಸುಮಾರು 15 ಲಕ್ಷ ಬೆಲೆಬಾಳುವ ಪದಾರ್ಥಗಳು ನಾಶವಾಗಿದೆ. ಇದು ಉಮೇಶ್ ಎಂಬುವರಿಗೆ ಸೇರಿದ ಚಿಪ್ಸ್ ಫ್ಯಾಕ್ಟರಿ ಆಗಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಮಾಲೀಕರಾದ ಉಮೇಶ್ ಫ್ಯಾಕ್ಟರಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಪೂರ್ವ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.