ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಆರೋಗ್ಯವಂತ ಮನುಷ್ಯನೂ ಸಹ ಪ್ರತೀ ಆರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಮತ್ತು ಮಾರ್ಗದರ್ಶನವನ್ನು ತಪ್ಪದೆ ಪಾಲಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವೋಲೊಗ್ರೂಪ್ ಆಫ್ ಇಂಡಿಯಾ ಮತ್ತು ನಾರಾಯಣ ಹೆಲ್ತ್ ಇವರ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಬುಧವಾರ ನಡೆದ ಸಂಚಾರಿ ಸಮುದಾಯ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂತಹ ತಪಾಸಣಾ ಶಿಬಿರ ನಡೆಸುತ್ತಿರುವ ವೋಲ್ಲೊ ಗ್ರೂಪ್ ಆಫ್ ಇಂಡಿಯಾ ಮತ್ತು ನಾರಾಯಣ ಹೆಲ್ತ್ ಅವರ ಕಾರ್ಯ ಶ್ಲಾಘನೀಯವಾಗಿದ್ದು, ಪ್ರತೀ ತಿಂಗಳು ವಾರಕ್ಕೆ ಎರಡು ಶಿಬಿರದಂತೆ ಎಂಟು ತಾಲೂಕುಗಳಲ್ಲಿ ಆರೋಗ್ಯ ತಪಾಸಣೆ ಮಾಡುತ್ತಿದ್ದು, ಇದು ಇತರರಿಗೆ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬೆಂಗಳೂರಿನ ನಾರಾಯಣ ಸಂಚಾರಿ ಸಮುದಾಯ ಆರೋಗ್ಯ ಶಿಬಿರದ ವ್ಯವಸ್ಥಾಪಕ ದೇವರಾಜನಾಯಕ ಮಾತನಾಡಿ, 100ಕ್ಕೂ ಅಧಿಕ ಮಂದಿಗೆ ವಿವಿಧ ತಪಾ ಸಣೆ ನಡೆಸಿದ್ದು, ಸದ್ಯದಲ್ಲಿ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಹೃದಯ ಮತ್ತು ಕ್ಯಾನ್ಸರ್‌ಸಂಬಂಧಿತ ಕಾಯಿಲೆಗಳ ತಪಾಷಣಾ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ನವೀನ್ ಕುಮಾರ್, ವೈದ್ಯ ಡಾ. ಶಿವಶಂಕರ್, ಬೆಂಗ ಳೂರಿನ ನಾರಾಯಣ ಸಂಚಾರಿ ಸಮುದಾಯ ಆರೋಗ್ಯ ಶಿಬಿರದ ವ್ಯವಸ್ಥಾಪಕ ದೇವರಾಜ ನಾಯಕ, ವೈದ್ಯರಾದ ಡಾ. ಸತೀಶ್ ಗೋವಿಂದ್, ಸಿಬ್ಬಂದಿಗಳಾದ ಪ್ರಕೃತಿ, ಎ.ಎನ್. ಗಗನ್, ಪ್ರೇಮ ಇದ್ದರು.
ಸಾರ್ವಜನಿಕ ಉದ್ದೇಶಕ್ಕೋಸ್ಕರ ವೊಲ್ವೊ ಕಂಪನಿ ತಯಾರಿಸಿದ್ದು, ಇದರಲ್ಲಿ 6 ವಿಭಾಗಗಳಿದ್ದು, 1)ಎಕ್ಸರೇ, 2) ಎಕೋ.3 )ECG. 4) ಸ್ತನ ಪರೀಕ್ಷಿಸಲು ಮೆಮೊಗ್ರಫಿ ಯಂತ್ರ.5) ಸುಸಜ್ಜಿತ ಪ್ರಯೋಗಾಲಯ. 7) ಮಹಿಳೆಯರಿಗೆ ಗರ್ಭಕೋಶ ಪರೀಕ್ಷಾ ವಿಭಾಗಗಳಿದ್ದು, ಎಲ್ಲವೂ ಸಂಪೂರ್ಣ ಉಚಿತವಾಗಿರುತ್ತದೆ. ಇದನ್ನು ವೊಲ್ವೊ ಕಂಪನಿ, ನಾರಾಯಣ ಹೃದಯಾಲಯದ ಸಿಬ್ಬಂಧಿಯ ಸಹಕಾರದೊಂದಿಗೆ ನಿರ್ವಹಣೆ ಮಾಡುತ್ತಿದೆ.
ಡಾ.ಡಿ.ನಟರಾಜು, ತಾಲ್ಲೂಕು ಆರೋಗ್ಯಾಧಿಕಾರಿ. ಕೆ.ಆರ್.ನಗರ ಮತ್ತು ಸಾಲಿಗ್ರಾಮ