Saturday, April 5, 2025
Google search engine

Homeರಾಜ್ಯಸುದ್ದಿಜಾಲಶೃಂಗೇರಿ ಜ್ಞಾನಭೂಮಿ ,ಕರ್ಮಭೂಮಿ, ಭಕ್ತಿ ಭೂಮಿ- ಸುರೇಶ್ ಎನ್ ಋಗ್ವೇದಿ

ಶೃಂಗೇರಿ ಜ್ಞಾನಭೂಮಿ ,ಕರ್ಮಭೂಮಿ, ಭಕ್ತಿ ಭೂಮಿ- ಸುರೇಶ್ ಎನ್ ಋಗ್ವೇದಿ

ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ 75 ನೇ ವರ್ಧಂತಿ

ಚಾಮರಾಜನಗರ: ಗುರುಭಕ್ತಿಯಿಂದ ಶಿಷ್ಯ ಪರಂಪರೆ ನೆಮ್ಮದಿ ಕಾಣಬಹುದು . ಭಾರತೀಯ ಸನಾತನ ಧರ್ಮದಲ್ಲಿ ಗುರುವಿಗೆ ಮಹತ್ವದ ಸ್ಥಾನ ಹಾಗು ಗೌರವವಿದೆ. ಭಾರತೀಯ ಸನಾತನ ಧರ್ಮದ ತಪಸ್ಸಿನ ಭದ್ರನೆಲೆ ಶೃಂಗೇರಿ. ಶೃಂಗೇರಿ ಜ್ಞಾನಭೂಮಿ ,ಕರ್ಮಭೂಮಿ, ಭಕ್ತಿ ಭೂಮಿಯಾಗಿದೆ. ಆದಿ ಜಗದ್ಗುರು ಶ್ರೀ ಶ್ರೀ ಶಂಕರಾಚಾರ್ಯರು ನೆಲೆಸಿ ಸ್ಥಾಪಿಸಿದ ಶ್ರೀ ಶಾರದಾ ಪೀಠ ಇಡೀ ಜಗತ್ತಿನ ಶ್ರೇಷ್ಠವಾದ ಆಧ್ಯಾತ್ಮ ಶಕ್ತಿ ಕೇಂದ್ರವಾಗಿದೆ. ಭಾರತೀಯರಾದ ನಮ್ಮೆಲ್ಲರಿಗೂ ನೆಮ್ಮದಿಯ ತಾಣವಾಗಿದೆ ಎಂದು ಸಂಸ್ಕೃತಿ ಚಿಂತಕ ,ಶ್ರೀ ಶಂಕರ ಅಭಿಯಾನದ ಪ್ರಧಾನರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ನಗರದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ 75 ನೇ ವರ್ಧಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಶೃಂಗೇರಿಯ ಸಮಗ್ರ ಅಭಿವೃದ್ಧಿಯ ಜೊತೆಗೆ ಆಧ್ಯಾತ್ಮಿಕವಾಗಿ ಶೃಂಗೇರಿ ಪರಂಪರೆಗೆ ಅತ್ಯಮೂಲ್ಯವಾದ ಮಾರ್ಗದರ್ಶನವನ್ನು ಇಡೀ ಜಗತ್ತಿಗೆ ನೀಡಿ ಶೃಂಗೇರಿಯ ಶಾರದಾ ಪೀಠದ ಮಹತ್ವವನ್ನು ಸದಾ ಕಾಲ ಜಾಗೃತಗೊಳಿಸಿ ಅರಿವನ್ನುಂಟು ಮಾಡುತ್ತಿರುವ ಮಹಾಸ್ವಾಮಿಗಳವರ 75 ರ ವರ್ಧಂತಿ ಎಲ್ಲಾ ಭಕ್ತರಿಗೆ ಮಹದಾನಂದವನ್ನು ಉಂಟುಮಾಡಿದೆ . ಗುರು ಭಕ್ತಿಯಿಂದ ಮಾನವ ಜೀವನ ಮತ್ತು ಬದುಕನ್ನು ನಡೆಸಬಹುದು. ಎಲ್ಲಾ ಮೂಲ ಸಮಸ್ಯೆಗಳ ಪರಿಹಾರ ಗುರು ಮಾರ್ಗದರ್ಶನದಿಂದ ಆಗುತ್ತದೆ. ಗುರುಗಳ ನಾಮ ಸ್ಮರಣೆ ಮಾನವನ ಸಮಗ್ರವಿಕಾಸಕ್ಕೆ ಪೂರಕವಾಗುತ್ತದೆ. ಶೃಂಗೇರಿಯ ಪವಿತ್ರತೆ ಹಾಗೂ ಪ್ರಶಾಂತತೆ ಮಾದರಿಯಾದದ್ದು. 36ನೇ ಪೀಠಾಧಿಪತಿಗಳಾದ ಜಗದ್ಗುರು ಭಾರತೀತೀರ್ಥರು ರಾಷ್ಟ್ರದ ವಿವಿಧ ಧಾರ್ಮಿಕ ಆಧ್ಯಾತ್ಮಿಕ ಅಭಿವೃದ್ಧಿ, ಶೃಂಗೇರಿಯ ದೇವಾಲಯ ಅಭಿವೃದ್ಧಿ, ಗೋಪುರ ನಿರ್ಮಾಣ, ವಿಶೇಷವಾಗಿ ಅಧ್ಯಾತ್ಮದ, ಚಿಂತನೆಯನ್ನು ಸದ್ಭಕ್ತರಿಗೆ ನೀಡಿ ಸದಾ ಕಾಲ ಆಶೀರ್ವದಿಸಿ ಸನ್ಮಾರ್ಗದಲ್ಲಿ ನಡೆಯಲು ಗುರುಗಳ ಚಿಂತನೆ ಸರ್ವರಿಗೂ ಮಾರ್ಗದರ್ಶನವಾಗಿದೆ ಎಂದರು.

ಶಾರದಾ ಭಜನಾ ಮಂಡಳಿಯ ಕುಸುಮ ಋಗ್ವೇದಿ,ವತ್ಸಲ ರಾಜಗೋಪಾಲ್, ಮಾಲಾ, ವಿಜಯಲಕ್ಷ್ಮಿ ,ವಾಣಿಶ್ರೀ ,ಶ್ರಾವ್ಯ, ಮುರುಗೇಶ್, ಲತಾ ,ಐಶ್ವರ್ಯ ಸರಸ್ವತಿ ,ಸುಪ್ರಿಯ, ರವಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular