Sunday, April 20, 2025
Google search engine

Homeಅಪರಾಧಬ್ಯಾನರ್ ಅಳವಡಿಸುವ ವೇಳೆ ದುರಂತ: ವಿದ್ಯುಸ್ಪರ್ಶದಿಂದಾಗಿ ಇಬ್ಬರು ಯುವಕರು ಮೃತ

ಬ್ಯಾನರ್ ಅಳವಡಿಸುವ ವೇಳೆ ದುರಂತ: ವಿದ್ಯುಸ್ಪರ್ಶದಿಂದಾಗಿ ಇಬ್ಬರು ಯುವಕರು ಮೃತ

ಆಂಧ್ರಪ್ರದೇಶ: ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವೇಳೆ ಇಬ್ಬರು ಅಭಿಮಾನಿಗಳು ಜೀವ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಜುಲೈ 23 ರಂದು, ನಟ ಸೂರ್ಯ ಅವರ ಹುಟ್ಟುಹಬ್ಬವಾಗಿತ್ತು, ಇತ್ತ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಬೇಕೆಂಬ ತಯಾರಿಯಲ್ಲಿದ್ದರು, ಇದಕ್ಕೆ ತಯಾರಿ ನಡೆಸುತ್ತಿದ್ದ ಅಭಿಮಾನಿಗಳು ತನ್ನ ಪ್ರೀತಿಯ ನಟನ ಹುಟ್ಟು ಹಬ್ಬಕ್ಕೆ ಬ್ಯಾನರ್ ತಯಾರಿಸಿ ಬೀದಿ ಬೀದಿಗಳಲ್ಲಿ ಕಟ್ಟುತ್ತಿದ್ದ ವೇಳೆ ಇಬ್ಬರು ಯುವಕರಿಗೆ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮೋಪುಲವಾರಿಪಾಲೆಂ ಗ್ರಾಮದ ನರಸರಾವ್‌ಪೇಟೆ ಮಂಡಲದ ನಕ್ಕಾ ವೆಂಕಟೇಶ್ ಮತ್ತು ಪೋಲೂರಿ ಸಾಯಿ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟ ದುರ್ದೈವಿಗಳು, ಇಬ್ಬರೂ ನರಸರಾವ್ ನಲ್ಲಿ ಖಾಸಗಿ ಕಾಲೇಜಿನಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು.

ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಯುವಕರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಅಲ್ಲದೆ ಅಭಿಮಾನಿಗಳ ಅಗಲುವಿಕೆಗೆ ನಟ ಸೂರ್ಯ ಕಂಬನಿ ಮಿಡಿದಿದ್ದಾರೆ.


RELATED ARTICLES
- Advertisment -
Google search engine

Most Popular