Tuesday, April 8, 2025
Google search engine

Homeರಾಜಕೀಯಕಾರ್ಯಕರ್ತರ ಸಾವಿನ ಮೇಲೆ ಬಿಜೆಪಿ ರಾಜಕೀಯ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕಾರ್ಯಕರ್ತರ ಸಾವಿನ ಮೇಲೆ ಬಿಜೆಪಿ ರಾಜಕೀಯ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ಕಾರ್ಯಕರ್ತರ ಸಾವಿನ ಮೇಲೆ ಬಿಜೆಪಿ ರಾಜಕೀಯ ಮಾಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಮೃತಪಟ್ಟ ಹಲವಾರು ಕಾರ್ಯಕರ್ತರ ಪಟ್ಟಿಗೆ ಈ ಹೆಸರು ಸೇರುತ್ತದೆ. ಕಾರ್ಯಕರ್ತರ ಸಾವಿನ ಮೇಲೆ ಬಿಜೆಪಿ ರಾಜಕೀಯ ಮಾಡುತ್ತದೆ. ಪ್ರಕರಣದ ಸತ್ಯಾಂಶವನ್ನು ನೋಡುವುದಿಲ್ಲ. ಸುಮ್ಮನೆ ದುರುದ್ದೇಶದಿಂದ ರಾಜಕೀಯ ಮಾಡುತ್ತಾರೆ ಎಂದು ಕಿಡಿಕಾರಿದರು.

ವಿನಯ್ ಸೋಮಯ್ಯ ಆತ್ಮಹತ್ಯೆಯ ಡೆತ್‍ನೋಟ್‍ನಲ್ಲಿ ಪೊನ್ನಣ್ಣ, ಮಂಥರ್ ಗೌಡ ಹೆಸರಿದೆಯಾ?, ಅದು ವಾಟ್ಸಪ್ ಮೆಸೇಜ್. ಬಿಜೆಪಿಯವರು ಇದೇ ರಾಜಕೀಯವನ್ನು ಕಲಬುರಗಿಯಲ್ಲಿ ಮಾಡಿದ್ದಾರೆ. ಇವರು ಸುಮ್ಮನೆ ಹೈಕಮಾಂಡ್ ಮನವೊಲಿಸಲು ಹಾಗೂ ಇವರ ಅಸ್ತಿತ್ವ ತೋರಿಸಿಕೊಳ್ಳಲು ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಯಾವುದೇ ಪ್ರಕರಣ ಸಾಬೀತಾಗಿಲ್ಲ. ಬಿಜೆಪಿಯವರು ಯಾವುದಾದರೂ ಒಂದು ಪ್ರಕರಣವನ್ನು ಸಾಬೀತು ಮಾಡಿದ್ದಾರಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

2 ತಿಂಗಳ ಹಿಂದೆ ಬೀದರ್‌ನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದ. ಬಿಜೆಪಿಯವರು ಅದನ್ನು ಫಾಲೋ ಅಪ್ ಮಾಡಿದ್ದಾರಾ?, ತನಿಖೆ ಆದಮೇಲೆ ಸಿಐಡಿ ಕಚೇರಿಗೆ ತೆರಳಿ ಪ್ರಕರಣದ ಸ್ಥಿತಿಗತಿ ವಿಚಾರಿಸಿದ್ದಾರಾ?, ನಮ್ಮ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ, ತನಿಖೆ ಏನಾಗಿದೆ ಎಂದು ನೋಡಿದ್ದಾರಾ? ಸದನದಲ್ಲಿ ಈ ವಿಚಾರ ಪ್ರಶ್ನೆ ಮಾಡಿದ್ದರಾ? ಇದ್ಯಾವುರನ್ನೂ ಬಿಜೆಪಿಯವರು ಮಾಡಿಲ್ಲ. ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದೇ ಇವರ ರಾಜಕೀಯ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿಸೂರ್ಯ ಅವರು ಒಂದು ಹೆಲ್ಪ್‌ ಲೈನ್ ಪ್ರಾರಂಭ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿ ಕಿರುಕುಳ ಕೊಡುತ್ತಿದೆ ಅಂದರೆ ಸಹಾಯವಾಣಿಗೆ ಕರೆ ಮಾಡಿ ಎಂದಿದ್ದರು. ಎಷ್ಟು ಜನ ಬಿಜೆಪಿ ಕಾರ್ಯಕರ್ತರು ಸಹಾಯವಾಣಿಗೆ ಕರೆ ಮಾಡಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಲಿ. ಬಿಜೆಪಿಯ ಶಾಸಕರಿಗೆ, ಸಂಸದರಿಗೆ ಆ ಸಹಾಯವಾಣಿಯ ನಂಬರ್ ಆದರೂ ನೆನಪಿದೆಯಾ? ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ವಿನಯ್ ಸೋಮಯ್ಯ ಪ್ರಕರಣ ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ಕೊಡಿ ಎಂದು ಹೇಳುತ್ತಾರೆ. ನಂತರ ಇದನ್ನು ಸಿಬಿಐಗೆ ಕೊಡಿ ಎಂದು ಕೇಳುತ್ತಿದ್ದಾರೆ. ಸಿಬಿಐ ಅವರೇ ನಮಗೆ ಪತ್ರ ಬರೆದಿದ್ದಾರೆ. ನೀವು ನಮಗೆ ಪ್ರಕರಣ ಕೊಡಬೇಡಿ. ಆಕಸ್ಮಾತ್ ಕೊಟ್ಟರೆ ಅದಕ್ಕೆ ಸಿಬ್ಬಂದಿಯನ್ನು ನೀವೇ ಕೊಡಬೇಕು. ಸಾರಿಗೆ ವ್ಯವಸ್ಥೆ ನೀವೇ ಕೊಡಬೇಕು. ಅದರ ಶುಲ್ಕ ನೀವೇ ಪಾವತಿಸಬೇಕು. ಕರ್ನಾಟಕ ಪೊಲೀಸರ ಸಹಾಯ ಪಡೆದೇ ತನಿಖೆ ಮಾಡುತ್ತೇವೆ. ನಾವು ಸ್ವತಂತ್ರವಾಗಿ ತನಿಖೆ ಮಾಡಲು ಆಗುವುದಿಲ್ಲ ಎಂದು ಬರೆದಿದ್ದಾರೆ. ಅದನ್ನು ಬಿಜೆಪಿಯವರು ಮರೆತುಬಿಟ್ಟಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

RELATED ARTICLES
- Advertisment -
Google search engine

Most Popular